

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ನರಿಕೊಂಬು ದ.ಕ ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್‌ಎಂಪಿಟಿ ಸಂಸ್ಥೆಯ ಸಿಎಸ್‌ಆರ್ ಅನುದಾನ 25 ಲಕ್ಷ ರೂ., ಶಾಲಾ ಅಭಿವೃದ್ಧಿ ಸಮಿತಿ, ಊರ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ನಿರ್ಮಾಣಗೊಳ್ಳಲಿರುವ ಶಾಲಾ ಅಕ್ಷರ ದಾಸೋಹ ಹಾಗೂ ಭೋಜನಾಲಯ ಕಟ್ಟಡ ಶಿಲಾನ್ಯಾಸ ಬುಧವಾರ ನೆರವೇರಿತು.
ಪುರೋಹಿತ ಕೃಷ್ಣರಾಜ ಭಟ್ ಪೂಜಾ ವಿಧಿ-ವಿಧಾನ ನೆರವೇರಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಕಟ್ಟಡ ರಚನೆಯ ಗುತ್ತಿಗೆದಾರ ಸಂದೀಪ್ ಶೆಟ್ಟಿ ಅರೆಬೆಟ್ಟು ಅವರಿಗೆ ಕಟ್ಟಡ ನಿರ್ಮಾಣ ಕಾಮಗಾರಿಯ ಜವಾಬ್ದಾರಿ ಹಸ್ತಾಂತರಿಸಿದರು.
ನರಿಕೊಂಬು ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಪುರುಷೋತ್ತಮ್ ಟೈಲರ್, ಕಿಶೋರ್ ಶೆಟ್ಟಿ, ಉಷಾಲಾಕ್ಷಿ, ರಮನಾಥ್, ಹೇಮಾವತಿ, ಸವಿತಾ, ಸುಜಾತಾ, ಪ್ರಮುಖರಾದ ಪ್ರೇಮನಾಥ್ ಶೆಟ್ಟಿ, ಮಾಧವ ಕರ್ಬೆಟ್ಟು, ಮಹಮದ್ ಇಲಿಯಾಸ್, ಸುರೇಶ್ ಕೋಟ್ಯಾನ್, ನಿವೃತ್ತ ಶಿಕ್ಷಕಿ ದೇವಕಿ, ಅನಿತಾ ಲಸ್ರಾದೋ, ಮಾಜಿ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಗ್ರಾಪಂ ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಲಕ್ಷ್ಮೀ ಪ್ರಕಾಶ್, ಸದಸ್ಯರಾದ ದಾಮೋದರ್, ಕೇಶವ, ಕಮಲಾಕ್ಷ, ಜಯ ಪ್ರಕಾಶ್, ಪ್ರಮೋದ್, ನವೀನ್, ಶಶಿಕಲಾ, ಪ್ರಿಯಾ, ಮೀನಾಕ್ಷಿ, ಮಾಜಿ ಸದಸ್ಯರಾದ ಸತೀಶ್, ಪ್ರಸಾದ್, ಗೋಪಾಲಕೃಷ್ಣ, ವೀಣಾ, ತಾಯಂದಿರ ಸಮಿತಿ ಉಪಾಧ್ಯಕ್ಷೆ ರೇಖಾ, ಸದಸ್ಯೆ ಅಮಿತಾ, ನರಿಕೊಂಬು ಸಂಘ-ಸಂಸ್ಥೆ ಅಧ್ಯಕ್ಷರಾದ ಚಂದ್ರಹಾಸ, ಕೃಷ್ಣಪ್ಪ ಮತ್ತಿತರರು ಇದ್ದರು.