ಭೋಗಿ ವಿನಿಮಯ ಮಾಡಿಕೊಂಡ ಮಹಿಳೆಯರು

Untitled design (7)
Published on

ಹಟ್ಟಿಚಿನ್ನದಗಣಿ: ಪಟ್ಟಣದ ನಾನಾ ಕಡೆ ಮುತ್ತೈದೆಯರು ಭೋಗಿ ವಿತರಿಸಿ ಭಾನುವಾರ ಸಂಕ್ರಾಂತಿ ಆಚರಿಸಿದರು. ಕಬ್ಬು, ಕಡಲೆ, ಹಣ್ಣು-ಹಂಪಲು, ಎಳ್ಳು-ಬೆಲ್ಲ, ಹತ್ತಿ, ಎಣ್ಣೆ, ತುಪ್ಪ, ಬೆಣ್ಣೆ ಸೇರಿ ಇತರ ಖಾದ್ಯಗಳನ್ನು ವಿನಿಮಯ ಮಾಡಿಕೊಂಡರು. ಬೆಳಗಿನ ಜಾವ ಎಳ್ಳಿನ ಸ್ನಾನ ಮಾಡಿ ಹಬ್ಬದ ತಯಾರಿ ನಡೆಸಿದರು. ಪಟ್ಟಣಕ್ಕೆ ಸಮೀಪ ಹರಿಯುವ ಕೃಷ್ಣಾ ನದಿ ದಡದಲ್ಲಿನ ಪ್ರೇಕ್ಷಣೀಯ ಸ್ಥಳಗಳಾದ ಟಣಮನಕಲ್, ಗುಂಡಲಬಂಡೆ ಜಲಪಾತ ಸೇರಿ ಇತರೆಡೆ ಜನರು ಪುಣ್ಯರು ಸ್ನಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net