ಡಿಎಸ್​ಎಸ್​ಗೆ ಭೀಮಶಾ ಖನ್ನಾ ಜಿಲ್ಲಾ ಸಂಚಾಲಕರಾಗಿ ಆಯ್ಕೆ

oppo_2
oppo_2
Published on

ಕಲಬುರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ಜಿಲ್ಲಾ ಸಂಚಾಲಕರನ್ನಾಗಿ ಭೀಮಶಾ ಖನ್ನಾ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸಂಘಟನಾ ಸಂಚಾಲಕ ಸುರೇಶ ಮೆಂಗನ್ ಅವರ ಅಧ್ಯಕ್ಷತೆಯಲ್ಲಿ ನಗರದ ಐವಾನ್ ಎ ಶಾಹಿ ಅತಿಥಿಗೃಹದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಅಭಿಷೇಕ ಉಪಾಧ್ಯಯ, ಗೌತಮ ಉಪಾಧ್ಯಯ, ಅರುಣಕುಮಾರ ಇನಾಂದಾರ, ಯಲ್ಲಾಲಿಂಗ ದೊಡ್ಡಮನಿ ಅವರನ್ನು ನಗರ ಸಮಿತಿ ಪದಾಧಿಕಾರಿಗಳು ಇದ್ದರು.

ಪದಾಧಿಕಾರಿಗಳು: ಭರತ್ ಧನ್ನಾ, ಶಿವಕುಮಾರ ಅಜಾದಪುರ, ದವಲಪ್ಪ ಮದನ, ವಿಜಯಕುಮಾರ ಟೈಗರ್, ಶಿವಪುತ್ರ ಹಾಗರಗಿ, ಶರಣು ಪೂಜಾರಿ, ಭಾಗಣ್ಣ ಕೋಳಕೂರ (ಜಿಲ್ಲಾ ಸಹ ಸಂಚಾಲಕರು), ಮಡಿವಾಳಪ್ಪ ಕಟ್ಟಿಮನಿ (ವಿದ್ಯಾರ್ಥಿ ಸಂಚಾಲಕ) ಅವರನ್ನು ನೇಮಕ ಮಾಡಲಾಗಿದೆ.

ಕಲಬುರಗಿ ತಾಲೂಕು: ವಿನೋದಕುಮಾರ ತೆಗನೂರ(ಸಂಚಾಲಕ), ಸಹದೇವ ದೊಡ್ಡಮನಿ, ರಾಕೇಶ ಅಜಾದಪುರ, ರಜನಿಕಾಂತ ಸಿಂಗೆ (ಸಂಘಟನಾ ಸಂಚಾಲಕ), ಗುರುಶಾಂತ ಗರ್ (ಖಜಾಂಜಿ). ಮಹೇಶ ಹೊಸಮನಿ (ನಗರ ಸಂಘಟನಾ ಸಂಚಾಲಕ), ಮಲ್ಲಿಕಾರ್ಜುನ ದೊಡ್ಡಮನಿ (ಕುಸನೂರ ಹೋಬಳಿ ಸಂಚಾಲಕ).

ಕಾಳಗಿ ತಾಲೂಕು: ಕರಣ ಜಿ. ರಾಜಾಪುರ(ಸಂಚಾಲಕ), ಮರೆಪ್ಪ ಸಿಂಗೆ, ಮಲ್ಲಿಕಾರ್ಜುನ ಕಟ್ಟಿಮನಿ, ಅನೀಲ ರಾಜಾಪುರ, ಶರಣು ಹದನೂರ (ಸಂಘಟನಾ ಸಂಚಾಲಕ), ನಾಗೇಶ ಹಲಗಿ (ಖಜಾಂಜಿ) ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ, ಸಂಘಟನಾ ಸಂಚಾಲಕ ಶಿವಕುಮಾರ ಅಜಾದಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net