

ಭೀಮಸಮುದ್ರ: ಸಮೀಪದ ಕಡ್ಲೇಗುದ್ದು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಪ್ರತಿನಿತ್ಯ ವಾಟ್ಸ್‌ಆ್ಯಪ್ ಮೂಲಕ ಬೋಧನೆ ಮಾಡುತ್ತಿದ್ದಾರೆ.
ಮುಖ್ಯಶಿಕ್ಷಕ ಮಹೇಶ್ ಅವರು ಪ್ರತಿನಿತ್ಯ 10ನೇ ತರಗತಿಯ ಮಕ್ಕಳಿಗೆ ವಾಟ್ಸ್‌ಆ್ಯಪ್ ಮೂಲಕ ಬೆಳಗ್ಗೆ 11ರಿಂದ 12.30ರ ವರೆಗೆ ಮತ್ತು ಸಂಜೆ 6 ರಿಂದ 7.30ರ ವರೆಗೆ ಪಾಠ ಮಾಡುವ ಮಾರ್ಗ ಕೊಂಡುಕೊಂಡಿದ್ದಾರೆ.
ಈ ಶಾಲೆಯಲ್ಲಿ 37 ವಿದ್ಯಾರ್ಥಿಗಳಿದ್ದು, ಒಂದು ದಿನ ಮುಂಚಿತವಾಗಿ ಶಿಕ್ಷಕರು ಸಿದ್ಧಪಡಿಸಿದ ಪಾಠಗಳ ಆಡಿಯೋ ಮತ್ತು ವಿಡಿಯೋ ರವಾನಿಸಲಾಗುತ್ತದೆ.
ಬಾಲಕರ ಮತ್ತು ಬಾಲಕಿಯರ ಪ್ರತ್ಯೇಕ ಗುಂಪುಗಳಿದ್ದು ಆಡಿಯೋ ಮತ್ತು ವೀಡಿಯೋ ಕೇಳಿ ಮನನ ಮಾಡಿಕೊಳ್ಳಬೇಕು. ನಿಗಧಿತ ಸಮಯಕ್ಕೆ ವಾಟ್ಸ್‌ಆಪ್‌ನಲ್ಲಿ ಎಲ್ಲ ವಿದ್ಯಾರ್ಥಿಗಳು ಚಾಲ್ತಿಯಲ್ಲಿದ್ದು, ಶಿಕ್ಷಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ವ್ಯವಸ್ಥೆ ಮಾಡಬೇಕು.
10ನೇ ತರಗತಿ ಓದುತ್ತಿರುವ ಮಕ್ಕಳ 30 ಪಾಲಕರ ಬಳಿ ವಾಟ್ಸ್‌ಆ್ಯಪ್ ಬಳಸುವ ಫೋನ್‌ಗಳಿವೆ. ಉಳಿದ 7 ಮಕ್ಕಳಿಗೆ ಇತರೆ ಸ್ನೇಹಿತರ ಜತೆ ಇರಲು ತಿಳಿಸಲಾಗಿದೆ.