

ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯಿತಿ 2ನೇ ಅವಧಿಗೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ಜರುಗಿತು. ಒಟ್ಟು 16 ಸದಸ್ಯರನ್ನು ಹೊಂದಿರುವ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚನ್ನಪ್ಪ ಹಳ್ಳಿಕೇರಿ, ರೇಣುಕಾ ದುಂಡಿ, ಭೀಮಪ್ಪ ಮಾಯಣ್ಣನವರ ನಾಮಪತ್ರ ಸಲ್ಲಿಸಿದ್ದರು. ಚನ್ನಪ್ಪ ಹಳ್ಳಿಕೇರಿ 4, ರೇಣುಕಾ ದುಂಡಿ 2 ಮತ ಪಡೆದರೆ, ಭೀಮಪ್ಪ ಮಾಯಣ್ಣವರ 10 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಜಗದೀಶ ಕಮ್ಮಾರ ಹೇಳಿದರು.
ನಂತರ ನೂತನ ಅಧ್ಯಕ್ಷ ಭೀಮಪ್ಪ ಮಾಯಣ್ಣವರ ಮಾತನಾಡಿ, ಗ್ರಾಮದ ಗುರು-ಹಿರಿಯರು ಮತ್ತು ಸದಸ್ಯರು ನಮ್ಮ ಮೇಲೆ ವಿಶ್ವಾಸ, ನಂಬಿಕೆ, ಇಟ್ಟು ಜವಾಬ್ದಾರಿ ವಹಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯರಗುಪ್ಪಿ , ಚಿಕ್ಕನೇರ್ತಿ ಹಾಗೂ ಮುಳ್ಳೊಳ್ಳಿ ಗ್ರಾಮಗಳ ಅಭಿವೃದ್ಧಿ ಶ್ರಮಿಸುತ್ತೇನೆ ಎಂದರು.
ಉಪಾಧ್ಯಕ್ಷೆ ಸಾಹೇಬಿ ಭದ್ರಾಪೂರ, ಸದಸ್ಯರಾದ ಶ್ರೀಕಾಂತ ಯಕ್ಕಣ್ಣವರ, ರವಿಚಂದ್ರ ಕುಂಬಾರ, ಶೋಭಾ, ಕೊಟಗಾರ, ಮಂಜುಳಾ ರೊಟ್ಟಿಗವಾಡ, ಹನಮವ್ವ ಗೊಬ್ಬರಗುಂಪಿ, ಸರೋಜಾ ಪಾಟೀಲ, ಚಂದ್ರಶೇಖರ ಮಡಿವಾಳರ, ಮಹೇಶ ಅಣ್ಣಿಗೇರಿ, ಲಕ್ಷ್ಮೀ ತಹಶೀಲ್ದಾರ, ಶಾರದಾ ಮಾದನೂರ, ಶಿವಾನಂದ ಕುಸುಗಲ್, ಮಹಾಂತಪ್ಪ ತಡಸದ, ಇತರರು ಉಪಸ್ಥಿತರಿದ್ದರು.