ಉಪಾಧ್ಯಕ್ಷರಾಗಿ ಭೀಮನಕೆರೆ ಬಸವರಾಜು ಅವಿರೋಧ ಆಯ್ಕೆ

21M.D.R.2
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0068,0.0000; brp_del_sen:0.3000,0.0000; motionR: null; delta:null; bokeh:0; module: photo;hw-remosaic: false;touch: (0.3912697, 0.31457153);sceneMode: 2621440;cct_value: 0;AI_Scene: (-1, -1);aec_lux: 153.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 40;
Published on

ಮದ್ದೂರು: ಪಟ್ಟಣದ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಭೀಮನಕೆರೆ ಬಸವರಾಜು ಅವಿರೋಧವಾಗಿ ಆಯ್ಕೆಯಾದರು.

ಎಂ.ವೀರಭದ್ರಸ್ವಾಮಿ ರಾಜೀನಾಮೆ ನೀಡಿದ್ದ ಹಿನ್ನೆಲೆ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜು ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಸಿ.ಎ.ಸುಧಾಕರ್ ಘೋಷಣೆ ಮಾಡಿದರು.

ನೂತನ ಉಪಾಧ್ಯಕ್ಷ ಬಸವರಾಜು ಮಾತನಾಡಿ, ಸಂಘದ ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ಸಂಘದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಮತ್ತು ಸಂಘದ ಷೇರುದಾರರಿಗೆ ಸಂಘದಿಂದ ಸಿಗುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತೇನೆ ಎಂದರು.

ಸಂಘದ ಅಧ್ಯಕ್ಷ ಎಚ್.ಬಿ.ಸ್ವಾಮಿ, ನಿರ್ದೇಶಕರಾದ ಎಂ.ವೀರಭದ್ರಸ್ವಾಮಿ, ಎಸ್.ಎಂ.ಗಂಗಾಧರ, ಬಿ.ವಿ.ಮಂಜುನಾಥ್, ತೋಂಟದಾರ್ಯ, ಎಂ.ವೀರೇಂದ್ರ, ಪಿ.ಬಿ.ಮಹದೇವಸ್ವಾಮಿ, ಎಸ್.ಸಿದ್ದಮ್ಮ, ಪಿ.ತ್ರಿವೇಣಿ, ಬಸವರಾಜು, ಪಿ.ರಾಜಶೇಖರ್, ಸಿ.ಜಿ.ಗೌರಿಶಂಕರ್, ಎಂ.ಸಿದ್ದಲಿಂಗಪ್ರಸಾದ್, ವೈ.ಬಿ.ಶ್ರೀಕಂಠಸ್ವಾಮಿ, ಕಾರ್ಯದರ್ಶಿ ರಾಜಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net