ಭೀಮಾ ಕೋರೆಗಾಂವ್ ವಿಜಯೋತ್ಸವ 19ರಂದು

Koregaonv
Published on

ನರಗುಂದ: ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸ್ವಾಭಿಮಾನಕ್ಕಾಗಿ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಪಟ್ಟಣದಲ್ಲಿ ಜ. 19ರಂದು ಆಚರಿಸಲಾಗುತ್ತದೆ ಎಂದು ಭೀಮಾ ಕೋರೆಂಗಾವ ಸಮಿತಿ ಸಂಚಾಲಕ ಡಾ. ಮುತ್ತು ಸುರಕೋಡ ಹೇಳಿದರು.

ವಿಜಯೋತ್ಸವದ ಅಂಗವಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಜಯೋತ್ಸವ ಸಮಿತಿ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಭಾರತೀಯ ಇತಿಹಾಸದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಅಸ್ಮರಣೀಯವಾಗಿದೆ. ಅಸ್ಪ್ರಶ್ಯತೆ ವಿರುದ್ಧ ನಡೆದ ಸಂಘರ್ಷ ಸ್ವಾಭಿಮಾನದ ಸಂಕೇತವಾಗಿದೆ. ಅದರ ಅಂಗವಾಗಿ ಜ. 19ರಂದು ಸಂಜೆ 5 ಗಂಟೆಗೆ ಪಟ್ಟಣದ ಬಾಲಕಿಯರ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿರುವ ವಿಜಯೋತ್ಸವದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಗುವುದು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸ್ಮರಣಾರ್ಥ ಏ. 14ರಂದು ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದರು.

ಪುರಸಭೆ ಸದಸ್ಯ ವಿಜಯ ಚಲವಾದಿ, ಗುರು ದೊಡಮನಿ, ರವಿ ಚಿಂತಾಲ, ಯಶವಂತ ನಡುವಿನಮನಿ, ಅಜೀತ ಗೋರಾಬಾಳ, ಯಲ್ಲಪ್ಪ ರಂಗಣ್ಣವರ, ಬಸವರಾಜ ಪೂಜಾರ, ಹನುಮಂತ ತಳವಾರ, ಅಭಿಷೇಕ ದೊಡಮನಿ, ಸಂಜು ಚಲವಾದಿ, ಮಂಜು ರಂಗಣ್ಣವರ, ಕುಮಾರ ರಂಗಣ್ಣವರ, ಪ್ರವೀಣ ಚಲವಾದಿ, ಶರೀಫ್ ಕಾಳೆ, ಮಂಜುನಾಥ ಚಲವಾದಿ, ಪ್ರವೀಣ ಹಿರೇಮನಿ, ದುರಗಪ್ಪ ಕಡೇಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net