

ಮದ್ದೂರು: ಛಲವಾದಿ ಮಹಾಸಭಾ ತಾಲೂಕು ಸಮಿತಿ ವತಿಯಿಂದ ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿರುವ ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಬಳಿ ಸೋಮವಾರ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.
ಛಲವಾದಿ ಮಹಾಸಭಾ ನಿರ್ದೇಶಕ ನಾಗಭೂಷಣ್ ಮಾತನಾಡಿ, ಕೋರೆಗಾಂವ್ ಯುದ್ಧದಲ್ಲಿ ಪೇಶ್ವೆಗಳ ವಿರುದ್ಧ ಹೋರಾಡಿ ಜಯ ಗಳಿಸಿದ ದಿನವೇ ಜನವರಿ 1. ಹೀಗಾಗಿ ಆ ದಿನದಂದು ಅಂಬೇಡ್ಕರ್ ಅವರು ಆ ಸ್ಥಳಕ್ಕೆ ಬಂದು ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸುತ್ತಿದ್ದರು ಎಂದರು.
ಇದೇ ವೇಳೆ ಪುರಸಭಾ ಆವರಣದಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಪುರಸಭಾ ಮಾಜಿ ಅಧ್ಯಕ್ಷ ಸುರೇಶ್, ಮುಖಂಡ ದೊರೆಸ್ವಾಮಿ, ಛಲವಾದಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಯೋಗೇಶ್, ನಿರ್ದೇಶಕರಾದ ಮಾದೇವಯ್ಯ, ನಾಗಭೂಷಣ್, ಪ್ರಸನ್ನ, ಸುಮಾವತಿ, ಅರುಣ್‌ಕುಮಾರ್, ಪುಟ್ಟಸ್ವಾಮಿ, ರಾಜೇಂದ್ರ, ರವಿ, ದಲಿತ ಸಮನ್ವಯ ಸಮಿತಿ ಅಧ್ಯಕ್ಷ ಶಂಕರ್, ದಲಿತ ಸಂಘರ್ಷ ಸಮಿತಿ ಶಿವು ಇತರರಿದ್ದರು.