ಭೀಮಾ ಕೋರೆಗಾಂವ್ ವಿಜಯೋತ್ಸವ

01-01-Shiva-4
ಭೀಮಾ ಕೋರೆಗಾಂವ್ ವಿಜಯ ದಿನದ ನಿಮಿತ್ತ ರಾಯಚೂರಿನಲ್ಲಿ ಛಲವಾದಿ ಮಹಾಸಭಾ ಮತ್ತು ದಲಿತ ಸಂಘಟನೆಗಳಿಂದ ಸೋಮವಾರ ವಿಜಯೋತ್ಸವ ಮೆರವಣಿಗೆ ನಡೆಸಲಾಯಿತು. ಪದಾಕಾರಿಗಳಾದ ಎಂ.ವಸಂತ, ಹನುಮಂತಪ್ಪ ಅತ್ತನೂರು, ಶಿವರಾಜ ಜಾನೇಕಲ್, ಮೂಕಪ್ಪ, ವೀರೇಶ ಗಾಣಧಾಳ, ವಿಜಯಪ್ರಸಾದ, ಭೀಮಪ್ಪ ನೆಲಹಾಳ ಇದ್ದರು.
Published on

ರಾಯಚೂರು: ಭೀಮಾ ಕೋರೆಗಾಂವ್ ವಿಜಯ ದಿನದ ನಿಮಿತ್ತ ಛಲವಾದಿ ಮಹಾಸಭಾ ಮತ್ತು ವಿವಿಧ ದಲಿತ ಸಂಘಟನೆಗಳಿಂದ ನಗರದಲ್ಲಿ ಸೋಮವಾರ ವಿಜಯೋತ್ಸವ ಮೆರವಣಿಗೆ ನಡೆಸಲಾಯಿತು.
ನಗರದ ರಾಮಲಿಂಗೇಶ್ವರ ಮೈದಾನದಲ್ಲಿ ಬುದ್ಧ, ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಪ್ರಮುಖ ಬೀದಿಗಳ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು.
ಕೋರೆಗಾಂವ್ ಕದನ ಭಾರತ ಇತಿಹಾಸದಲ್ಲೇ ಮಹತ್ವದ ಸ್ಥಾನ ಪಡೆದಿದ್ದು, 500 ಮಹಾರ್ ಹೋರಾಟಗಾರರು 28 ಸಾವಿರ ಪೇಶ್ವೆ ಸೈನಿಕರ ವಿರುದ್ದ ಕಾದಾಡಿದ ಗೆಲುವು ಸಾಸಿ ಇತಿಹಾಸ ಸೃಷ್ಟಿಸಿದ್ದರು. ಮಹಾರರ ಗೆಲುವಿನ ಸವಿನೆನಪಿಗಾಗಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘಟನೆ ಪದಾಕಾರಿಗಳಾದ ಎಂ.ವಸಂತ, ಹನುಮಂತಪ್ಪ ಅತ್ತನೂರು, ಶಿವರಾಜ ಜಾನೇಕಲ್, ಮೂಕಪ್ಪ, ವೀರೇಶ ಗಾಣಧಾಳ, ವಿಜಯಪ್ರಸಾದ, ಭೀಮಪ್ಪ ನೆಲಹಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net