

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಬಿ.ಎನ್.ರಸ್ತೆಯಲ್ಲಿ ದೇಶದ ಪ್ರಮುಖ ಆಭರಣ ಸಂಸ್ಥೆಗಳಲ್ಲಿ ಒಂದಾದ ಭೀಮಾ ಜುವೆಲ್ಸ್‌ನ ನವೀಕೃತ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಜಗತ್ತಿನಾದ್ಯಂತ 98 ವರ್ಷಗಳ ಕಾಲ ನಂಬಿಕೆ, ಕರಕುಶಲತೆ ಮತ್ತು ಶುದ್ಧತೆ ಉಳಿಸಿಕೊಂಡಿರುವ ಭೀಮಾ ಜುವೆಲ್ಸ್ ತಮ್ಮ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಮೈಸೂರಿನ ಆಭರಣ ಮಳಿಗೆಯನ್ನು ನವೀಕರಿಸಿದ್ದು, ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ನವೀಕೃತ ಮಳಿಗೆಗೆ ಚಾಲನೆ ನೀಡಿದರು.
2006ರಲ್ಲಿ ಈ ಮಳಿಗೆಯನ್ನು ತೆರೆಯಲಾಗಿತ್ತು. ಗ್ರಾಹಕರ ಸ್ನೇಹಿಯಾಗಿ ಮಳಿಗೆಯನ್ನು ನವೀಕರಿಸಲಾಗಿದೆ. ನವೀಕೃತ ಮಳಿಗೆಯು ಅನೇಕ ವೈಶಿಷ್ಟೃಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ.
ನಟಿ ರಚಿತಾ ರಾಮ್ ಮಾತನಾಡಿ, ಉತ್ತಮ ಚಿನ್ನಾಭರಣಗಳನ್ನು ನೀಡುವ ಮೂಲಕ ಸಾರ್ವಜನಿಕರನ್ನು ಹೆಚ್ಚಾಗಿ ಆಕರ್ಷಿಸುತ್ತಿರುವ ಭೀಮಾ ಜುವೆಲ್ಸ್ ಇನ್ನೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಿ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಿ. ನಮ್ಮ ಮನೆಯ ಎಲ್ಲರೂ ಭೀಮಾ ಜುವೆಲ್ಸ್‌ನ ದೊಡ್ಡ ಗ್ರಾಹಕರಾಗಿದ್ದಾರೆ. ನಮಗೆಲ್ಲ ಭಿಮಾ ಜುವೆಲ್ಸ್ ಎಂದರೆ ಅಚ್ಚುಮೆಚ್ಚು ಎಂದರು.
ಮೇಯರ್ ಶಿವಕುಮಾರ್ ಮಾತನಾಡಿ, ಭೀಮಾ ಜುವೆಲ್ಸ್ ಸಂಸ್ಥೆ ಗುಣಮಟ್ಟದ ಚಿನ್ನ ಮಾರಾಟಕ್ಕೆ ಹೆಸರು ಸಂಪಾದಿಸಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಉತ್ತಮ ಸ್ಥಾನಗಳಿಸಿದೆ ಎಂದರು. ಭೀಮಾ ಜುವೆಲ್ಸ್ ಸಂಸ್ಥೆಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಶುಭ ಕೋರಿದರು.
ಭೀಮಾ ಜುವೆಲ್ಸ್ ಅಧ್ಯಕ್ಷ ಬಿ.ಬಿಂದುಮಾಧವ್ ಮಾತನಾಡಿ, ಭೀಮಾ ಜುವೆಲ್ಸ್ ಮೈಸೂರು ಜನರ ಹೃದಯದಲ್ಲಿದೆ. ಗ್ರಾಹಕರು ಅಭಿಮಾನದಿಂದ ನಮ್ಮ ಜುವೆಲ್ಸ್‌ನಲ್ಲಿ ಆಭರಣಗಳನ್ನು ಖರೀದಿಸುತ್ತಿದ್ದಾರೆ ಎಂದರು.
ಜುವೆಲ್ಸ್‌ನ ಎಂಡಿ ಅಭಿಷೇಕ್ ಬಿಂದುಮಾಧವ್ ಮಾತನಾಡಿ, ಗ್ರಾಹಕರಿಗೆ ಇಷ್ಟವಾಗುವ ಹೊಸ ಹೊಸ ವಿನ್ಯಾಸಗಳನ್ನು ಪರಿಚಯಿಸಿದ್ದೇವೆ. ಯುವ ಸಮುದಾಯವನ್ನು ಆರ್ಷಿಸುವಂತಹ ಹಾಗೂ ವೆಡ್ಡಿಂಗ್ ಕಲೆಕ್ಷನ್‌ಗಳು ಇವೆ ಎಂದರು.
98ನೇ ವಾರ್ಷಿಕೋತ್ಸವದ ಅಂಗವಾಗಿ ಭೀಮಾ ಸೂಪರ್ ಸರ್ಪ್ರೈಸಸ್ ಪ್ರಚಾರವನ್ನು ಪ್ರಾರಂಭಿಸುತ್ತಿದ್ದೇವೆ. ಈ ಸಂಬಂಧ ಚಿನ್ನ, ಬೆಳ್ಳಿ, ವಜ್ರದ ಆಭರಣಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತದೆ. ಜತೆಗೆ ಗ್ರಾಹಕರಿಗೆ ನಾನಾ ರೀತಿಯ ಉಡುಗೊರೆ, ಇನ್‌ಸ್ಟಾ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ ಎಂದು ತಿಳಿಸಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಇತರರು ಇದ್ದರು.