ಭೀಮಾನದಿಯಲ್ಲಿ ಪ್ರವಾಹ ರಕ್ಷಣೆ ಅಣಕು ಪ್ರದರ್ಶನ

IMG-20240813-WA0017
Published on

ಕಲಬುರಗಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಸರಡಗಿ ಗ್ರಾಮದಲ್ಲಿ ಭೀಮಾ ನದಿ ತೀರದಲ್ಲಿ ಪ್ರವಾಹ ಸಂತ್ರಸ್ಥರ ರಕ್ಷಣೆಯ ಅಣಕು ಪ್ರದರ್ಶನವನ್ನು ಮಂಗಳವಾರ ನಡೆಸಿ, ಜಾಗೃತಿ ಮೂಡಿಸಲಾಯಿತು.

ಜಿಲ್ಲಾಡಳಿತ, ಅಗ್ನಿಶಾಮಕ ದಳ, ರಾಜ್ಯ ವಿಪತ್ತು ಸ್ಪಂದನಾ ಪಡೆ, ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯಿತಿಯ ಸಿಬ್ಬಂದಿ ತಂಡ ಅಣಕು ಪ್ರದರ್ಶನದಲ್ಲಿ ಭಾಗವಹಿಸಿ, ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳುವ ರಕ್ಷಣಾ ಕ್ರಮಗಳ ಬಗ್ಗೆ ಪ್ರದರ್ಶಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಈಶಾನ್ಯ ವಲಯ ಐಜಿಪಿ, ಪ್ರಭಾರ‌ ಪೊಲೀಸ್ ಕಮಿಷನರ್ ಅಜಯ್ ಹಿಲೋರಿ, ಎಸ್‌ಡಿಆರ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಗುರುನಾಥ, ಡಿಎಚ್ ಒ ರತಿಕಾಂತ ಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬೋಟ್ ಏರಿ ವೀಕ್ಷಣೆ ಮಾಡಿದರು. ನದಿಯ ಆಚೆ ದಡದಲ್ಲಿ ನೀರಲ್ಲಿ ಸಿಲುಕಿದ್ದ ಇಬ್ಬರನ್ನು ಮತ್ತು ಕುರಿಯನ್ನು ರಕ್ಷಣೆ ಮಾಡಿದ ಪ್ರಾತ್ಯಕ್ಷಿಕೆ ನಡೆಸಿದರು.

ನದಿಯಲ್ಲಿ ಸಿಲುಕಿದವರನ್ನು ರಕ್ಷಿಸಿ ನದಿಯಿಂದ ಹೊರ ತಂದು ಪ್ರಥಮ ಚಿಕಿತ್ಸೆ ಕೊಡಿಸುವುದು, ನದಿಯಲ್ಲಿ ಮುಳುಗುತ್ತಿದ್ದವರನ್ನು ಲೈಪ್ ಜಾಕೆಟ್ ಎಸೆದು ಹೊರ ತರುವುದು, ನದಿಯ ಪ್ರವಾಹಕ್ಕೆ ಸಿಲುಕಿ ಗಾಯಗೊಂಡವರನ್ನು ಸ್ಟ್ರೆಚರ್ ತಂದು ಚಿಕಿತ್ಸೆ ಕೊಡಿಸುವಂತಹ ಅಣಕು ಪ್ರದರ್ಶನ ನಡೆದವು.

ಮೋಟಾರ್ ಮೇಲೆ ಕಾರ್ಯನಿರ್ವಹಿಸುವ ಓಬಿಎಂ ಬೋಟ್ ಗಳು ಅಗ್ನಿಶಾಮಕ 1, ಎಸ್ ಡಿಆರ್ ಎಫ್ 2, ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆಯ 2 ಬೋಟ್ ಗಳು ಅಣಕು ಪ್ರದರ್ಶನದಲ್ಲಿ ಇದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net