ಗ್ರಾಪAಗಳಿಗೆ ಭೀಮ ಬಲ: ಬಿ.ವೈ.ವಿಜಯೇಂದ್ರ

13 ಎಸ್ಕೆಪಿ_1
ಹೋತನಕಟ್ಟೆ ಗ್ರಾಪಂ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ಗ್ರಾಪಂ ಅಧ್ಯಕ್ಷ ಮಧು ಪುಟ್ಟಪ್ಪ ಸನ್ಮಾನಿಸಿದರು. ಗೌರಿಬಾಯಿ, ವಸಂತಗೌಡ, ಪಾಲಾಕ್ಷಪ್ಪ, ಪರಮೇಶ್ ಇತರರಿದ್ದರು.
Published on

ಶಿಕಾರಿಪುರ: ಅಽಕಾರ ವಿಕೇಂದ್ರೀಕರಣದಿAದಾಗಿ ನಮ್ಮ ಗ್ರಾಮ ಪಂಚಾಯಿತಿಗಳಿಗೆ ಭೀಮ ಬಲ ಬಂದಾಗಿದೆ. ಗ್ರಾಮಗಳಲ್ಲಿ ಬಿಜೆಪಿ ಸರ್ಕಾರ ಇದೆ ಎಂದರೆ ಅದು ರಾಮ ರಾಜ್ಯಕ್ಕೆ ಮೂಲ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಹೋತನಕಟ್ಟೆ ಗ್ರಾಮದ ನೂತನ ಗ್ರಾಮ ಪಂಚಾಯಿತಿ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಈಗ ಪ್ರತಿ ಗ್ರಾಮಗಳಲ್ಲಿಯೂ ಮೂಲ ಸೌಕರ್ಯಗಳಿಗೆ ಆಯಾ ಗ್ರಾಪಂ ಆದ್ಯತೆ ನೀಡಿವೆ. ಸರ್ಕಾರವೂ ಸಾಕಷ್ಟು ಅನುದಾನ ನೀಡುತ್ತಿದ್ದು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಸ್ವಚ್ಛ, ಸುಂದರ ಸ್ವಾಸ್ಥ ್ಯ ಗ್ರಾಮ ನಿರ್ವಹಣೆಯಲ್ಲಿ ನಾವು ಹಿಂದೆ ಬೀಳಬಾರದು. ಪಕ್ಷಾತೀತವಾಗಿ, ಜಾತ್ಯತೀತವಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ನಮ್ಮ ಪ್ರಬಲ ಸಂವಿಧಾನದಿAದ ಇಂದು ಎಲ್ಲ ಸಮುದಾಯದವರು, ಧರ್ಮದವರು ಅಽಕಾರದ ಗದ್ದುಗೆ ಏರಿದ್ದಾರೆ. ಸಂವಿಧಾನ ನಮ್ಮ ಹೆಮ್ಮೆ. ನಮ್ಮ ಊರಿನ ಅಭಿವೃದ್ಧಿಗೆ ನಾವೇ ಸಂಕಲ್ಪ ಮಾಡಬೇಕು. ನಮ್ಮ ಪಂಚಾಯಿತಿ ನಾಡಿನ ಶ್ರೇಷ್ಠ ಪಂಚಾಯಿತಿ ಆಗಬೇಕು. ಜತೆಗೆ ಆರೋಗ್ಯ, ಶಿಕ್ಷಣ, ವಸತಿ, ನೀರು ಸೇರಿ ಪ್ರಮುಖ ಅಂಶಗಳ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಹೇಳಿದರು. ಹೋತನಕಟ್ಟೆಯಲ್ಲಿ ಹೊಸ ಗ್ರಾಪಂ ಕಟ್ಟಡ ನಿರ್ಮಾಣವಾಗಿದ್ದು ಇಲ್ಲಿನ ಜನರ ಸಮಸ್ಯೆಗಳಿಗೆ ದನಿಯಾಗಿ ಕೆಲಸ ಮಾಡಬೇಕು ಎಂದು ಗ್ರಾಪಂ ಅಽಕಾರಿಗಳಿಗೆ ಸಲಹೆ ನೀಡಿದರು.
ಹೋತನಕಟ್ಟೆ ಗ್ರಾಪಂ ಅಧ್ಯಕ್ಷ ಮಧುಪುಟ್ಟಪ್ಪ, ಉಪಾಧ್ಯಕ್ಷೆ ಗೌರಿಬಾಯಿ, ಮುಖಂಡರಾದ ವಸಂತಗೌಡ, ಪಾಲಾಕ್ಷಪ್ಪ, ಇಒ ಪರಮೇಶ್, ಹೋತನಕಟ್ಟೆ ಗ್ರಾಪಂ ಸದಸ್ಯರು, ಗ್ರಾಮಸ್ಥರು, ಪಿಡಿಒ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net