ಭೀಮೆಗೆ ಒಳ ಹರಿವು ಹೆಚ್ಚಾದಲ್ಲಿ ನದಿ ದಂಡೆಯ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ-ಬಿ.ಫೌಜಿಯಾ ತರನ್ನುಮ್

oplus_148897824
oplus_148897824
Published on
 ಜಿಲ್ಲಾಧಿಕಾರಿಗಳಿಂದ ಸೊನ್ನ ಬ್ಯಾರೇಜ್ ವೀಕ್ಷಣೆ
ಕಲಬುರಗಿ :  ಮಹಾರಾಷ್ಟ್ರದ ವೀರ್ ಮತ್ತು ಉಜನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಭೀಮಾ ನದಿಗೆ ಹರಿಬಿಡಲಾಗುತ್ತಿದ್ದು, ಮುಂದೆ ಇದು ಇನ್ನು ಹೆಚ್ಚಾದಲ್ಲಿ ನದಿ ದಂಡೆಯಲ್ಲಿರುವ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಎಲ್ಲಾ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಅಫಜಲಪೂರಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ತಾಲೂಕು ಮತ್ತು ಗ್ರಾಮ ಮಟ್ಟದ ಎಲ್ಲಾ ಹಂತದ ಅಧಿಕಾರಿ-ಸಿಬ್ಬಂದಿಗಳು ಕೇಂದ್ರಸ್ಥಾನದಲ್ಲಿದ್ದು ಜನ ಮತ್ತು ಜಾನವಾರುಗಳ ಪ್ರಾಣ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ನದಿ ದಂಡೆ ಕಡೆ ಬಟ್ಟೆ ಒಗೆಯಲು, ದನ-ಕರು ಮೇಯಿಸಲು ಹೋಗದಂತೆ ಗ್ರಾಮವಾರು ಡಂಗೂರ ಸಾರಬೇಕು ಎಂದರು.
ತಾಲೂಕಿನ ಧಾರ್ಮಿಕ ಸ್ಥಾನಗಳಾದ ದೇವಲ ಗಾಣಗಾಪೂರ ಮತ್ತು ಘತ್ತರಗಾ ಬಳಿ ಸೇತುವೆ ಮೇಲೆ ನೀರು ಹರಿದು ಸಂಪರ್ಕ ಕಡಿತಗೊಂಡಲ್ಲಿ ಭಕ್ತಾದಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದ್ದು, ಇಂತಹ ಸಮಯದಲ್ಲಿ ಸ್ಥಳೀಯ ಆಡಳಿತ ಅವರ ನೆರವಿಗೆ ಧಾವಿಸಬೇಕು ಎಂದು ತಾಲೂಕಾ ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ಅನೀಡಿದರು.
ಪ್ರವಾಹ ಪೀಡಿತ ಪ್ರದೇಶದಲ್ಲಿ ಬೆಳೆ ಹಾನಿ ಸಮೀಕ್ಷೆ ಕೈಗೊಂಡು ವರದಿ ಸಲಿಸಬೇಕು. ಮನೆ ಕುಸಿದು ಬಿದ್ದಲ್ಲಿ, ಭಾಗಶ: ಹಾನಿಯಯಾದಲ್ಲಿ ಎನ್.ಡಿ.ಆರ್.ಎಫ್./ ಎಸ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ತಕ್ಷಣವೇ ಪರಿಹಾರ ಒದಗಿಸಬೇಕು. ಸತತ ಮಳೆಯಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಕಾಟ ಹೆಚ್ಚಲಿದ್ದು, ಆರೋಗ್ಯ  ಇಲಾಖೆ ಇದರ ನಿಯಂತ್ರಣಕ್ಕೆ ಮುಂದಾಗಬೇಕು. ಹಳ್ಳಿಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕೆಂದ ಅವರು ಒಟ್ಟಾರೆಯಾಗಿ ಗ್ರಾಮವಾರು ಟಾಸ್ಟ್ ಫೋರ್ಸ್ ಕಮಿಟಿ ಚುರುಕಾಗಬೇಕು ಎಂದರು.
*ಸೊನ್ನ-ಘತ್ತರಗಾ ಬ್ಯಾರೇಜ್ ವೀಕ್ಷಣೆ:*
ಗುರುವಾರ ಅಪಾರ ಪ್ರಮಾಣದ ನೀರು ವೀರ್ ಜಲಾಶಯದಿಂದ ಹರಿಬಿಟ್ಟಿದ್ದ ಪರಿಣಾಮ ಸೊನ್ನ ಬ್ಯಾರೇಜಿಗೆ ಒಳ ಹರಿವು ಹೆಚ್ಚಾಗಿರುವುದರಿಂದ ಬ್ಯಾರೇಜಿನ ಸ್ಥಿತಿಗತಿ ಅರಿಯಲು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳೊಂದಿಗೆ ಬ್ಯಾರೇಜಿಗೆ ಭೇಟಿ ನೀಡಿ ಒಳ ಹರಿವು ಹಾಗೂ ಹೊರ ಹರಿವಿನ ಮಾಹಿತಿ ಪಡೆದರು. ತದನಂತರ ಘತ್ತರಗಾ ಸೇತುವೆಗೆ ಭೇಟಿ ನೀಡಿ ಅಲ್ಲಿ ಭಕ್ತಾಧಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಬ್ರಿಡ್ಜ್ ಮೇಲೆ ನೀರು ಬಂದಿರುವುದರಿಂದ ಅಪಾಯ ಮಟ್ಟದಲ್ಲಿದ್ದು, ಯಾರು ನದಿ ದಂಡೆ ಮತ್ತು ಸೇತುವೆ ಕಡೆ ಹೋಗಬಾರದು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಸಹಾಯಕ ಆಯುಕ್ತೆ ಸಾಹಿತ್ಯ, ತಹಶೀಲ್ದಾರ ಸಂಜೀವ್ ಕುಮಾರ್ ದಾಸರ್, ಕೆ.ಬಿ.ಜೆ.ಎನ್.ಎಲ್ ರಾಂಪೂರ್ ವಿಭಾಗದ ಅಧೀಕ್ಷಕ ಅಭಿಯಂತ ಮನೋಜಕುಮಾರ, ಕೆ.ಎನ್.ಎನ್.ಎಲ್ ಬಿ.ಎಲ್.ಐ.ಎಸ್. ವಿಭಾಗದ ಇ.ಇ ಶಿವಕುಮಾರ ಸ್ವಾಮಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net