ಭಾವಸಾರ ಕ್ಷತ್ರಿಯ ಸಮಾಜಕ್ಕೆ ಆಯ್ಕೆ

IMG_20250403_195017_361.jpg
Published on

ಹುಬ್ಬಳ್ಳಿ: ಇಲ್ಲಿಯ ಪಾನ್ ಬಜಾರ್ ವಿಠಲ ಹರಿಮಂದಿರದ ಭಾವಸಾರ ಭವನದಲ್ಲಿ ಬುಧವಾರ ಭಾವಸಾರ ಕ್ಷತ್ರಿಯ ಸಮಾಜದ ಸರ್ವ ಸಾಧಾರಣ ಸಭೆಯನ್ನು ಆರ್.ಎಂ. ಮಾಳದಕರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಮುಂದಿನ ಮೂರು ವರ್ಷದ ಅವಧಿಗೆ ಭಾವಸಾರ ಕ್ಷತ್ರಿಯ ಸಮಾಜ ಪಾನ್ ಬಜಾರ್ ಘಟಕದ ಅಧ್ಯಕ್ಷರಾಗಿ ದತ್ತಾತ್ರೇಯ ಕುಂಠೆ, ಸೇವಾ ಸಂಘದ ಅಧ್ಯಕ್ಷರಾಗಿ ಮಹೇಶ ಸರ್ವದೆ ಹಾಗೂ ಮಹಿಳಾ ಮಂಡಳದ ಅಧ್ಯಕ್ಷರಾಗಿ ಭಾರತೀತಾಯಿ ಸರ್ವದೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಹಿರಿಯ ಸದಸ್ಯ ಮಾರುತಿರಾವ್ ರಾಶಿಂಕರ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಸಮಾಜ ಬಾಂಧವರು ಪದಾಧಿಕಾರಿಗಳಿಗೆ ಅಭಿನಂದಿಸಿದರು. ಕಾರ್ಯದರ್ಶಿ ಜಗದೀಶ ಹಂಚಾಟೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net