ಭಾವರೋಗಕ್ಕೂ ವಚನಗಳ ಮೂಲಕ ಚಿಕಿತ್ಸೆ

sharana
Published on

ಮುಂಡರಗಿ: ಯೋಗದೊಂದಿಗೆ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುವುದು ತುಂಬಾ ಅಗತ್ಯ ಎಂದು ನಿವೃತ್ತ ಪ್ರಾಚಾರ್ಯ ವಿ.ಎಫ್. ಅಂಗಡಿ ಹೇಳಿದರು.

ಪಟ್ಟಣದ ಚೈತನ್ಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ತಾಲೂಕು ಕಸಾಪ, ಶರಣ ಸಾಹಿತ್ಯ ಪರಿಷತ್ ಹಾಗೂ ಚೈತನ್ಯ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಶರಣ ಚಿಂತನ ಮಾಲೆಯ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನ್ಮೋಲ್ ಯೋಗ ಕೇಂದ್ರದ ನಿರ್ದೇಶಕಿ ಮಂಗಳಾ ಇಟಗಿ ಮಾತನಾಡಿ, 12ನೇ ಶತಮಾನದಲ್ಲಿ ರಚನೆಯಾದ ವಚನಗಳು ಸರ್ವಕಾಲಕ್ಕೂ ಸಲ್ಲುತ್ತವೆ. ಶರಣರ ವಚನಗಳಲ್ಲಿ ಮಾನವನ ಬದುಕಿಗೆ ಉಪಯುಕ್ತವಾದ ವಿಚಾರ ಚಿಂತನೆಗಳನ್ನು ಒಳಗೊಂಡಿವೆ. ಶರಣ ವೈದ್ಯ ಸಂಗಣ್ಣನವರು ಕೇವಲ ಜನರ ಭವರೋಗಕ್ಕೆ ಮಾತ್ರ ಚಿಕಿತ್ಸೆ ನೀಡಿಲ್ಲ. ಅವರು ಭಾವರೋಗಕ್ಕೂ ವಚನಗಳ ಮೂಲಕ ಚಿಕಿತ್ಸೆ ನೀಡಿದ್ದಾರೆ. ವಚನಕಾರರು ಕೂಡ ವಚನಗಳ ಮೂಲಕ ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ದಿಯನ್ನು ಪ್ರತಿಪಾದಿಸಿದರು’ ಎಂದರು.

ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಂ.ಐ. ಮುಲ್ಲಾ ಅವರು ಕಸಾಪ ಕಟ್ಟಡಕ್ಕೆ 5 ಸಾವಿರ ರೂ.ಸಹಾಯಧನದ ಚೆಕ್ ನೀಡಿದರು.

ಎಂ.ಜಿ. ಗಚ್ಚಣ್ಣವರ, ಉಮಾ ದೊಡ್ಡಮನಿ, ಗಿರಿಜಾ ಕೋರಿಶೆಟ್ಟರ, ವಾಸಂತಿ ಯಾಳಗಿ, ಸುಮಿತ್ರಾ ಜಾಧವ್, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ಜಯಶ್ರೀ ಅಳವಂಡಿ, ಈರಮ್ಮ ಕುಂದಗೋಳ, ಲಕ್ಷ್ಮೀದೇವಿ ಗುಬ್ಬಿ, ರತ್ನಾ ಕಾಗನೂರಮಠ ಶ್ರೀದೇವಿ ಗೋಡಿ, ಯುವರಾಜ ಮುಂಡರಗಿ, ಎಂ.ಎಸ್. ಹೊಟ್ಟಿನ್, ಆರ್.ಕೆ. ರಾಯನಗೌಡ್ರ, ನಾರಾಯಣಪ್ಪ ಗುಬ್ಬಿ, ಮೋಹನಗೌಡ ಪಾಟೀಲ, ಎನ್.ಎಸ್. ಅಲ್ಲಿಪುರ, ಡಾ. ನಿಂಗು ಸೊಲಗಿ, ಎಂ.ಎಸ್. ಅಳವಂಡಿ, ಹನುಮರೆಡ್ಡಿ ಇಟಗಿ, ಕೊಟ್ರೇಶ ಜವಳಿ, ವಿಶ್ವನಾಥ ಉಳ್ಳಾಗಡ್ಡಿ ಉಪಸ್ಥಿತರರರು ಇದ್ದರು. ಎಂ.ಜಿ. ಗಚ್ಚಣ್ಣವರ ಪ್ರಾಸ್ತವಿಕವಾಗಿ ಮಾತನಾಡಿದರು. ವೀಣಾ ಪಾಟೀಲ ನಿರೂಪಿಸಿದರು. ಎಂ.ಐ. ಮುಲ್ಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net