ಧರ್ಮರಾಧನೆಯಿಂದ ಸುಖ ಸ್ವಯಂ ಪ್ರಾಪ್ತಿ

JAIN NEW
Published on

ಹುಬ್ಬಳ್ಳಿ : ಧರ್ಮವನ್ನು ಅನುಸರಿಸುವವರು ಸುಖ, ಶಾಂತಿಯ ಅಪೇಕ್ಷೆ ಮಾಡುವ ಅವಶ್ಯಕತೆ ಇರುವುದಿಲ್ಲ, ಧಮಾತ್ಮರಿಗೆ ಅವು ಸ್ವಯಂ ಪ್ರಾಪ್ತಿ ಆಗುತ್ತವೆ ಎಂದು ಮಂಡ್ಯ ಜಿಲ್ಲೆ ಆರತಿಪುರ ಜೈನ ಮಠದ ಸ್ವಸ್ತಿಶ್ರೀ ಸಿದ್ದಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ನಗರದ ಶಾಂತಿನಾಥ ಭವನದಲ್ಲಿ ದಶಲಕ್ಷಣ ಪರ್ವದ ಎರಡನೇ ದಿನವಾದ ಗುರುವಾರದ ಪೂಜಾ ವಿಧಾನದ ಸಾನಿಧ್ಯ ವಹಿಸಿ, ಅವರು ಆಶೀರ್ವಚನ ನೀಡಿದರು.

ಧರ್ಮ ಹೊರಗಡೆ ಇಲ್ಲ. ನಮ್ಮ ಅಂತರಂಗದಲ್ಲಿಯೇ ಇದೆ. ನಮ್ಮ ಆತ್ಮದಲ್ಲಿಯೇ ಇದೆ. ಕ್ಷಮೆ, ಮಾರ್ದವಾದಿ ದಶಗುಣಗಳು ಅಲ್ಲಿವೆ. ಆದರೆ ಕೊ್ರೕಧ, ಮಾನ, ಮಾಯೆ ಹಾಗೂ ಲೋಭಗಳೆಂಬ ಕವಚಗಳು ಧರ್ಮಸಹಿತ ನಿಜ ಸ್ವಭಾವದಲ್ಲಿ ಇರುವ ಆತ್ಮನ ಸುತ್ತ ಕೋಟೆ ನಿರ್ವಿುಸಿವೆ. ಈ ಕೋಟೆಯನ್ನು ಬೇಧಿಸಿ ಆತ್ಮನ ನಿಜಗುಣಗಳನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಗರ್ವಗಳನ್ನು ತೊರೆದು ಮಾರ್ದವತೆಗೆ ಮೊರೆ ಹೋದಾಗ ಮನುಷ್ಯ ಜೀವನ ಸುಖ, ಸಮೃದ್ಧಿಯ ಕಡೆಗೆ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿನಾಭಿಷೇಕ, ಪೂಜಾ ವಿಧಾನಗಳು ಸಂಪನ್ನಗೊಂಡವು. ದೇಶಭೂಷಣ ಹಾಗು ಮೇಘಾ

ಜಗಶೆಟ್ಟಿ ದಂಪತಿ ಸೇವಾಕರ್ತರಾಗಿದ್ದರು.

ರಾಜೇಂದ್ರ ಬೀಳಗಿ, ಶ್ರೇಣಿಕರಾಜ ರಾಜಮಾನೆ, ಶ್ರೇಯಾಟಸ ರೋಖಡೆ, ಮದನ ದಂಡಾವತಿ, ಪ್ರಕಾಶ ಜವಳಿ, ಅಜಿತ ಮಾಲಗತ್ತಿ, ಧರಣೇಂದ್ರ ಇಜಾರಿ, ಅಭಿನಂದನ ಗೊಂಗಡಿ, ನಿತೀಶ ಇಜಾರಿ, ಮಹಾವೀರ ಗೊಂಗಡಿ, ಸಂತೋಷ ಗೊಂಗಡಿ, ಶಾಂತಿನಾಥ ಹೋತಪೇಟಿ, ಮನ್ಮಥ ಕ್ಯಾಸಾ, ರಾಮಚಂದ್ರ ದಿನಕರ, ನಯನ ಗೋಟಡಕಿ, ಮೀನಾ ಬಾಗಿ, ಉಷಾ ಬೀಳಗಿ, ನಯನ ತಾಳಿಕೋಟಿ, ವಸಂತ ಜೖನ, ಚೇಳನಾ ರಾಜಮಾನೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net