

ಹುಬ್ಬಳ್ಳಿ: ಶಿರಹಟ್ಟಿಯ ಶ್ರೀ ಫಕೀರ ಸಿದ್ದರಾಮ ಸ್ವಾಮೀಜಿಯವರ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಭಾವೈಕ್ಯತಾ ರಥಯಾತ್ರೆಯು ಶನಿವಾರ ಹುಬ್ಬಳ್ಳಿಯ ಉಣಕಲ್ಲ್ ಭಾಗದಲ್ಲಿ ಸಂಚರಿಸಿತು.
ರಥಯಾತ್ರೆಯು ಉಣಕಲ್ಲ್ ಶ್ರೀ ಸಿದ್ದಪ್ಪಜ್ಜನ ದೇವಸ್ಥಾನದಿಂದ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಣಕಲ್ಲ್ನ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಜನಜಾಗೃತಿ ಸಭೆ ನಡೆಯಿತು. ಶ್ರೀ ಫಕೀರ ಸಿದ್ದರಾಮ ಸ್ವಾಮಿ ಹಾಗೂ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು.
ರಥಯಾತ್ರೆಯ ಮಾರ್ಗದುದ್ದಕ್ಕೂ ಭಕ್ತರು ಆರತಿ ಬೆಳಗಿದರು. ಮನೆ ಮುಂದೆ ರಂಗೋಲಿ ಬಿಡಿಸಿದ್ದರು. ಜಯ ಘೊಷ ಕೂಗಿ ಸಂಭ್ರಮಿಸಿದರು. ಅನೇಕ ಭಕ್ತರು ಕಾಣಿಕೆ ಅರ್ಪಿಸಿದರು.
ಕುಕನೂರಿನ ಶ್ರೀ ಚನ್ನಮಲ್ಲಯ್ಯ ಸ್ವಾಮಿ, ಮಲ್ಲಿಕಾರ್ಜುನ ಸಾವಕಾರ, ಸಂಗನಬಸವ ದೇವರ ಬಿಳಗಿ, ಪಾಲಿಕೆ ಸದಸ್ಯರಾದ ರಾಜಣ್ಣಕೂರವಿ, ಉಮೇಶಗೌಡ ಕೌಜಗೇರಿ, ಮಹಾದೇವಪ್ಪ ಮೆಣಸಿನಕಾಯಿ, ಗುರು ಸೂರ್ಯವಂಶಿ, ಗುರು ಕೆಂಚಣ್ಣವರ, ಬಸಪ್ಪ ಹೆಬ್ಬಾಳಿ, ಈರಣ್ಣ ಹರಕೂಣಿ, ಪರಪ್ಪ ಮೆಣಸಿನಕಾಯಿ, ಬಾಬು ಹೊಟಗಿ, ಹನುಮಂತಪ್ಪ ದೊಡ್ಡಮನಿ, ಕುಮಾರಗೌಡ ಪಾಟೀಲ, ಮಲ್ಲಿಕಾರ್ಜುನ ಸಿರಗುಪ್ಪಿ, ಇತರರು ಇದ್ದರು.