

ಹುಬ್ಬಳ್ಳಿ: ಶಿರಹಟ್ಟಿ ಜಗದ್ಗುರು ಶ್ರೀಫಕೀರ ಸಿದ್ದರಾಮ ಸ್ವಾಮೀಜಿ ಅಮೃತ ಮಹೋತ್ಸವ ಅಂಗವಾಗಿ ನಗರದಲ್ಲಿ ಆಯೋಜಿಸಿರುವ ಭಾವ್ಯಕ್ಯ ರಥಯಾತ್ರೆ ಗುರುವಾರ ಕೇಶ್ವಾಪುರ ಭಾಗದಲ್ಲಿ ಸಂಚರಿಸಿತು.
ಮಹಿಳೆಯರು ಪೂರ್ಣಕುಂಭ ಆರತಿಯೊಂದಿಗೆ ಶ್ರೀಫಕೀರ ಸಿದ್ಧರಾಮ ಸ್ವಾಮೀಜಿ ಹಾಗೂ ಶ್ರೀಫಕೀರ ದಿಂಗಾಲೇಶ್ವರ ಸ್ವಾಮೀಜಿಗಳನ್ನು ಸ್ವಾಗತಿಸಿದರು.
ರಥಯಾತ್ರೆ ಮಾರ್ಗದುದಕ್ಕೂ ಅಂಗಳ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಲಾಗಿತ್ತು. ಹೂಗಳಿಂದ ಅಲಂಕರಿಸಲಾಗಿತ್ತು.
ಉಭಯ ಸ್ವಾಮೀಜಿಗೆ ಜಯವಾಗಲಿ ಎಂದು ಘೋಷಣೆಗಳು ಮೊಳಗಿದವು. ಅಲೆಮಾರಿ ಜಾನಪದ ಕಲಾವಿದರ ಗೊಂಬೆಕುಣಿತ ಹಾಗೂ ಮಕ್ಕಳ ವೇಷಭೂಷಣಗಳು ಮೆರವಣಿಗೆಗೆ ಮೆರಗು ನೀಡಿದವು.
ಕೇಶ್ವಾಪುರ, ಆಜಾದ ಕಾಲನಿ, ಶಾಂಡಿಲ್ಯಾಶ್ರಮ, ನಾಗಶೆಟ್ಟಿಕೊಪ್ಪ, ದೊಡ್ಡ ಓಣಿ ಮೂಲಕ ಸಾಗಿ ಮಾರುತಿ ದೇವಸ್ಥಾನ ಆವರಣದಲ್ಲಿ ಜನಜಾಗೃತಿ ಸಭೆ ಜರುಗಿತು.
ಬೀಳಗಿಯ ಶ್ರೀ ಸಂಗನಬಸವ ದೇವರು, ಕುಕನೂರಿನ ಚನ್ನಮಲ್ಲಸ್ವಾಮೀಜಿ, ಮಲ್ಲಿಕಾರ್ಜುನ ಸಾವಕಾರ, ಬಸಯ್ಯ ಹಿರೇಮಠ, ಮಲೇಶಪ್ಪ ಹೆಬಸೂರ, ಮೇನಕಾ ಹುರಳಿ, ಶಂಕರ ಸುಂಕದ, ಹನಮಂತಪ್ಪ ಅವಣ್ಣನವರ, ಸಿದ್ದಯ್ಯ ಹಿರೇಮಠ, ಬಸವರಾಜ ಬನ್ನಿಕಟ್ಟಿ, ಶೇಖಣ್ಣ ಕುಂಬಾರ, ಚಿದಾನಂದ ದಂಡಪ್ಪನವರ, ಮಾರುತಿ ಬೀಳಗಿ, ಹನುಮಂತಪ್ಪ ದೊಡ್ಡಮನಿ, ಸದಾಶಿವ ಚೌಶೆಟ್ಟಿ, ವಿಜಯಾಲಕ್ಷ್ಮಿ ತಿಮೋಲಿ ಉಪಸ್ಥಿತರಿದ್ದರು.