ಆರ್ಟ್ ಆಫ್ ಲಿವಿಂಗ್‌ನಲ್ಲಿ ಭಾವ್-2025 ಕಾರ್ಯಕ್ರಮ

art
Published on

ಬೆಂಗಳೂರು: ಭಾರತದ ಅತೀ ದೊಡ್ಡ ಕಲೆ ಮತ್ತು ಸಂಸ್ಕೃತಿಯ ವಾರ್ಷಿಕ ಸಮ್ಮೇಳನ ಭಾವ್-2025 ಆರ್ಟ್ ಆಫ್ ಲಿವಿಂಗ್‌ನಲ್ಲಿ ಗುರುವಾರ ಆರಂಭವಾಗಿದ್ದು, ಭಾನುವಾರ (ಜ26) ದವರೆಗೆ ನಡೆಯಲಿದೆ.

600 ಶಿಬಿರಾರ್ಥಿಗಳು ಹಾಗೂ ವೈವಿಧ್ಯಮಯ ಕಲಾಕ್ಷೇತ್ರಗಳ ದಿಗ್ಗಜರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರು ದಿವಸಗಳ ಈ ಸಮಾವೇಶದಲ್ಲಿ ಕಲಾವಿದರು ಹಾಗೂ ಸಾಂಸ್ಕೃತಿಕ ದಿಗ್ಗಜರಾಗಿರುವ ಮಂಜಮ್ಮ ಜೋಗತಿ, ಸುನಂದಾ ದೇವಿ, ಬನ್ನಂಜೆ ಸುವರ್ಣ ಮತ್ತಿತರರು ಭಾಗವಹಿಸಲಿದ್ದಾರೆ. ತಮ್ಮ ಜೀವನವನ್ನೇ ರಾಜ್ಯದ ಭವ್ಯ ಸಾಂಸ್ಕೃತಿಕ ಹಾಗೂ ಜನಪದ ಪರಂಪರೆಗೆ ಮುಡಿಪಾಗಿಟ್ಟಿರುವ ಇವರು, ತಮ್ಮ ಪಯಣದ ಹಾದಿಯನ್ನು ಹಂಚಿಕೊಳ್ಳಲಿದ್ದಾರೆ.

ದಿ ಆರ್ಟ್ ಆಫ್ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿ ಪ್ರತಿಯೊಂದು ಸಂಸ್ಕೃತಿಯೂ ಸಹ ಜಗತ್ತಿನ ಪರಂಪರೆಯ ಭಾಗವಾಗಿದ್ದು, ಅವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಹೇಳಿದ್ದಾರೆ.

ಭಾವ್ 2025 ವೈಭವಯುತವಾದ ಕರ್ನಾಟಕ, ಮಹಾನ್ ಕಲಾವಿದರು, ಅರಳುತ್ತಿರುವ ಪ್ರತಿಭೆಗಳ ಸಂಗಮ, ಆಧುನಿಕ ಕಲಾರೂಪಗಳು, ಸಂಗೀತ ವಾದ್ಯಗಳು, ಜನಪದ ಹಾಗೂ ಪಾರಂಪರಿಕ ನೃತ್ಯ ರೂಪಕಗಳು, ರಂಗಮಂಚದ ಕಲಾರೂಪ, ಕೈಗಾರಿಕೆ ಮತ್ತು ಪ್ರದರ್ಶನ ಕಲೆಗಳ ಬಗ್ಗೆ ಬೆಳಕು ಚೆಲ್ಲಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net