ಭಟ್ಕಳ ಪೊಲೀಸರಿಂದ ಕಾರ್ಯಾಚರಣೆ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 2 ಲಕ್ಷ ರೂ.ಮೌಲ್ಯದ ವಿದೇಶಿ ಸಿಗರೇಟ್ ವಶಕ್ಕೆ

cigarate
Published on

ಉತ್ತರ ಕನ್ನಡ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 2 ಲಕ್ಷಕ್ಕೂ ಅಧಿಕ ಮೌಲ್ಯದ ವಿದೇಶಿ ಸಿಗರೇಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಏಳು ಸಿಗರೇಟ್ ಬಾಕ್ಸ್​ನಲ್ಲಿದ್ದ 3500 ವಿದೇಶಿ ಸಿಗರೇಟ್ ವಶಕ್ಕೆ ಪಡೆದು, ಮರಜುಕ್ ಅಹ್ಮದ್ ಫಾರುಕ್ ಎಂಬುವವನನ್ನು ಬಂಧಿಸಲಾಗಿದೆ

ಭಟ್ಕಳದ ಹೂವಿನ ಚೌಕ ಸಮೀಪ ಕಟ್ಟಡವೊಂದರ ಮೇಲೆ ಸೋಮವಾರ ಬೆಳಗ್ಗೆ ದಾಳಿ ನಡೆಸಿದ ಪೊಲೀಸರು ಸುಮಾರು 2.25,500 ರೂ.ಮೌಲ್ಯದ ವಿದೇಶಿ ಸಿಗರೇಟನ್ನು ವಶಕ್ಕೆ ಪಡೆದಿದ್ದಾರೆ.

ರಿಮ್ಸ್​ ಹೆಸರಿನ ಅಂಗಡಿಯ ಮೇಲೆ ದಾಳಿ ನಡೆಸಿದ ವೇಳೆ, ಕಟ್ಟಡವೊಂದರಲ್ಲಿ ಸಿಗರೇಟ್​ ಶೇಖರಣೆ ಮಾಡಿರುವುದು ಪತ್ತೆ ಹಚ್ಚಲಾಗಿದೆ. ಅಪ್ರಾಪ್ತರಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net