ಪುರಾತನ ರಘುನಾಥ ದೇವಸ್ಥಾನದಲ್ಲಿ ತುಂಬಿಕೊಂಡ ಚರಂಡಿ ನೀರು

Bhatkal Rain
Published on

ಭಟ್ಕಳ: ಪಟ್ಟಣದಲ್ಲಿ ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಮಂಗಳವಾರದಿAದ ಸುರಿಯುತ್ತಿರುವ ಮಳೆಗೆ ಪಟ್ಟಣದ ರಘುನಾಥ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದ್ದು, ನೀರನ್ನು ಹೊರಹಾಕಲು ಅರ್ಚಕ ಕುಟುಂಬ ಹರಸಾಹಸ ಪಟ್ಟಿದೆ.

ಪಟ್ಟಣದ ಹೃದಯಭಾಗದಲ್ಲಿರುವ ಅತ್ಯಂತ ಪುರಾತನ ಶ್ರೀ ರಘುನಾಥ ದೇವಸ್ಥಾನ ಭಟ್ಕಳದಲ್ಲಿ ಸುರಿಯುವ ಮಳೆಗೆ ಜಲಾವೃತವಾಗಿದೆ. ಪಟ್ಟಣದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವದು ರಸ್ತೆಯಲ್ಲಿ ಹರಿಯುವ ನೀರು ಒಳಗೆ ಬರುತ್ತಿದೆ. ಇದನ್ನು ಶುದ್ದ ಮಾಡಿ ಪೂಜೆ ಪುರಸ್ಕಾರ ನಡೆಸುವದು ಅರ್ಚಕ ಕುಟುಂಬಕ್ಕೆ ಸವಾಲಿನ ಸಂಗತಿಯಾಗಿ ಮಾರ್ಪಟ್ಟಿದೆ. ಪುರಸಭೆಯೂ ದೇವಸ್ಥಾನಕ್ಕೆ ಈ ಹಿನ್ನಲೆಯಲ್ಲಿ ಯಾವುದೆ ಸಹಕಾರ ನೀಡುತ್ತಿಲ್ಲ. ದೇವಸ್ಥಾನದ ಸುತ್ತಮುತ್ತ ಕನಿಷ್ಟ ಸರಾಗವಾಗಿ ನೀರು ಹರಿದುಹೋಗಲು ವ್ಯವಸ್ಥೆ ಮಾಡಿಕೊಟ್ಟರೆ ನೀರು ಒಳನುಗ್ಗುವದಿಲ್ಲ. ಈ ದೇವಸ್ಥಾನ ಪುರಾತನ ಇಲಾಖೆಗೆ ಸೇರಿರುವದು ಯಾವುದೆ ದುರಸ್ತಿ ಮಾಡಲು ಸಾದ್ಯವಾಗದೆ ಇರುವದರಿಂದ ದೇವಸ್ಥಾನದವರು ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ. ಪ್ರತಿವರ್ಷ ಇದೆ ಸ್ಥಿತಿ ಇಲ್ಲಿ ಎದುರಾಗುತ್ತಿದ್ದು, ಧಾರ್ಮಿಕ ಆಚರಣೆಗೆ ತೊಡಕಾಗುತ್ತಿರುವದು ಸಮಜ ಬಾಂಧವರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೆ ಸಂಬAಧಿಸಿದ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ. ವೆ.ಮೂ. ರಾಮಚಂದ್ರ ಭಟ್, ರಾಘು ಭಟ್, ಸಿಯಾ ಭಟ್, ರಜತ ಭಟ್, ವಿನಯಾ ಭಟ್, ಮಾರುತಿ ಭಟ್ ನೀರು ಹೊರಹಾಕಲು ಹರಸಾಹಸ ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net