ಬೆಹಳ್ಳಿಯಲ್ಲಿ ನವಿಲು ಕೊಂದವ ಅಂದರ್

27- BKL NAVILU
Published on

ಭಟ್ಕಳ: ತಾಲೂಕಿನ ಮುಟ್ಟಳ್ಳಿಯ ಬೆಹಳ್ಳಿಯಲ್ಲಿ ಏರ್‌ಗನ್‌ನಿಂದ ಗುಂಡು ಹಾರಿಸಿ ಹೆಣ್ಣು ನವಿಲನ್ನು ಸಾಯಿಸಿದ ಆರೋಪಿಯನ್ನು ಭಾನುವಾರ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಪುರವರ್ಗ ಮುಗ್ಳಿಹೊಂಡ ನಿವಾಸಿ ಇನಾಯಿತುಲ್ಲಾ ಮೈಲಪ್ಪಿ (40) ಬಂಧಿತ. ಈತ ನವಿಲನ್ನು ಸಾಯಿಸಿ ದ್ವಿಚಕ್ರ ವಾಹನದಲ್ಲಿ ಹಾಕಿಕೊಂಡು ಸಬ್ಬತ್ತಿ ಕಡೆಗೆ ಸಾಗಿಸುವಾಗ ಅರಣ್ಣ ಇಲಾಖೆ ಸಿಬ್ಬಂದಿ ನವಿಲು ಸಮೇತ ವಶಕ್ಕೆ ಪಡೆದಿದ್ದಾರೆ. ವನ್ಯಜೀವಿ ಕಾಯ್ದೆಯಡಿ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿ ಸಂದೀಪ ಭಂಡಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net