ಭಟ್ಕಳ: ಹೊನ್ನಾವರ ತಾಲೂಕಿನ ರ್ಕ ಗ್ರಾಮ ಪಂಚಾಯಿತಿ ಪಾವಿನಕುರ್ವಾ ಸೇತುವೆ ನಿರ್ವಿುಸಿ ಕೊಡುವಂತೆ ರ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಪಂಚಾಯಿತಿ ಸದಸ್ಯರು ಮುರ್ಡೆಶ್ವರದಲ್ಲಿ ಏರ್ಪಡಿಸಿದ್ದ ಜನಸ್ಪಂದನಾ ಸಭೆಯಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.

ಹೊನ್ನಾವರ ತಾಲೂಕಿನ ರ್ಕ ಗ್ರಾಮ ಪಂಚಾಯಿತಿ ರ್ಕ ಗ್ರಾಮದ ಪಾವಿನಕುರ್ವಾಗೆ ಹೋಗಲು ಇರುವ ತೂಗುಸೇತುವೆ ತುಂಬಾ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಮೀನುಗಾರರು, ಶಾಲಾ ಮಕ್ಕಳು, ಸಾರ್ವಜನಿಕರು ದೋಣಿ ದಾಟಿ ರ್ಕ ಗ್ರಾಮ ಪಂಚಾಯಿತಿ ಮುಖಾಂತರ ಹೊನ್ನಾವರಕ್ಕೆ ಬರಬೇಕು. ರಸ್ತೆಯ ಮುಖಾಂತರ ಬರಲು 12 ರಿಂದ 14 ಕಿ.ಮೀ. ಕ್ರಮಿಸಬೇಕಾಗುತ್ತದೆ. ಅಲ್ಲದೆ, ತೂಗುಸೇತುವೆ ಯಾವುದೇ ಸಂದರ್ಭದಲ್ಲಿ ಬೀಳುವ ಸಾಧ್ಯತೆ ಇದೆ ಎಂದು ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಹೇಳಿರುವುದು ಗ್ರಾಮಸ್ಥರಲ್ಲಿ ಆತಂಕ ತಂದಿದೆ ಎಂದು ಸಚಿವರ ಬಳಿ ಅಳಲು ತೋಡಿಕೊಂಡರು. ಮನವಿ ಸ್ವೀಕರಿಸಿದ ಸಚಿವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಜಿಲ್ಲೆಯಿಂದ ಆಗಮಿಸಿದ ಸಹಸ್ರಾರು ಜನರು:

ಸಚಿವರ ಜನತಾ ದರ್ಶನಕ್ಕೆ ತಾಲೂಕು ಮತ್ತು ಜಿಲ್ಲೆಯ ವಿವಿಧೆಡೆಯಿಂದ ಜನರು ಆಗಮಿಸಿದ್ದರು. ಜನರು ವಾಸ್ತವ್ಯದ ಮನೆ, ರಸ್ತೆ, ಪಿಂಚಣಿ ಯೋಜನೆ, ಆರೋಗ್ಯ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸಚಿವರು ಶಾಂತ ಚಿತ್ತದಿಂದ ಕುಳಿತು ಜನರ ಸಮಸ್ಯೆಗಳನ್ನು ಕೇಳಿದರು. ಕೆಲವೊಂದು ಸಮಸ್ಯೆಗಳಿಗೆ ಸಚಿವರು ಸ್ಥಳದಲ್ಲೇ ಪರಿಹಾರ ದೊರಕಿಸಿದರೆ, ಇನ್ನು ಕೆಲವು ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳ ಬಳಿ ಮಾತನಾಡಿ ಪರಿಹರಿಸಿಕೊಡುವಂತೆ ಸೂಚಿಸಿದರು.

ಜನತಾ ದರ್ಶನದಲ್ಲಿ ನೂರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲ ಅರ್ಜಿಗಳನ್ನು ಖುದ್ದು ಸಚಿವರೇ ಪರಿಶೀಲಿಸಿದರು. ಜನತಾ ದರ್ಶನಕ್ಕೆ ಆಗಮಿಸಿದ ಜನರಿಗೆ ಸಚಿವರು ಉಪಾಹಾರದ ವ್ಯವಸ್ಥೆ ಮಾಡಿದ್ದರು. ಜನತಾ ದರ್ಶನದ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಅಲ್ಬರ್ಟ್ ಡಿಕೋಸ್ತ ಮುಂತಾದವರಿದ್ದರು.