ಶೋಷಿತರ ಉದ್ಧಾರಕ್ಕೆ ಶ್ರಮಿಸಿದ ನಾಯಕ

1-bkl- narayan
Published on

ಭಟ್ಕಳ: ನಾರಾಯಣ ಗುರು ಅವರು ಬುದ್ಧ, ಬಸವ, ರಾಮಕೃಷ್ಣ, ವಿವೇಕಾನಂದರಂತೆ ಶೋಷಿತರ ಉದ್ಧಾರಕ್ಕಾಗಿ ಶ್ರಮಿಸಿದರು. ಅವರ ಮಹತ್ಕಾರ್ಯಗಳಿಂದ ನಾವೆಲ್ಲ ಪ್ರೇರಣೆ ಪಡೆಯಬೇಕು ಎಂದು ಹೆಸ್ಕಾಂ ಇಂಜಿನಿಯರ್ ಶಿವಾನಂದ ನಾಯ್ಕ ಹೇಳಿದರು.
ಇಲ್ಲಿನ ಶ್ರೀ ನಾರಾಯಣ ಗುರು ವಸತಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿಯಲ್ಲಿ ಅವರು ಮಾತನಾಡಿದರು.
ನಾರಾಯಣ ಗುರು ಜಯಂತಿ ಸಮಿತಿ ಸಂಚಾಲಕ ಮನಮೋಹನ ನಾಯ್ಕ ಮಾತನಾಡಿ, ನಾರಾಯಣ ಗುರುಗಳ ಜಯಂತಿಯನ್ನು ತಾಲೂಕು ಮಟ್ಟದಲ್ಲಿ ಬೃಹತ್ ಪ್ರಮಾಣದಲ್ಲಿ ಆಯೋಜನೆ ಮಾಡಲು ಸಿದ್ಧತೆ ನಡೆಯುತ್ತಿದ್ದು, ಸೆ. 10ರಂದು ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಗಂಗಾಧರ ನಾಯ್ಕ, ನಾರಾಯಣ ಗುರು ವಸತಿ ಶಾಲೆ ಪ್ರಾಂಶುಪಾಲ ರಮೇಶ ನಾಯ್ಕ ಮಾತನಾಡಿದರು. ನಾರಾಯಣ ಗುರುಗಳ ಜೀವನ ಮತ್ತು ಸಾಮಾಜಿಕ ಸುಧಾರಣೆಗಳು ವಿಷಯ ಕುರಿತು ಏರ್ಪಡಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಸಾಹಿತ್ಯ ಪರಿಷತ್ ವತಿಯಿಂದ ಬಹುಮಾನ ವಿತರಿಸಲಾಯಿತು.ಪಾಂಡುರಂಗ ನಾಯ್ಕ, ರಾಧಿಕಾ ಗೌಡ, ವಿಜಿತಾ ನಾಯ್ಕ, ವೆಂಕಟೇಶ ಮುಕ್ರಿ, ಅನಿಲ ದೇಶಭಂಡಾರಿ, ಕುಲದೀಪ ನಾಯ್ಕ, ಇದ್ದರು. ಕಾವ್ಯ ನಾಯ್ಕ ಪ್ರಾರ್ಥಿಸಿದರು. ಹರ್ಷಿತ್ ದೊಡ್ಮನಿ ವಂದಿಸಿದರು. ವಿದ್ಯಾರ್ಥಿನಿ ಛಾಯಾ ನಾಯ್ಕ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net