ಸಚಿವ ಮಂಕಾಳ ವೈದ್ಯಗೆ ಸನ್ಮಾನ

17-MANKLA SANMAN
Published on

ಭಟ್ಕಳ: ಪಟ್ಟಣದ ರಂಗಿನಕಟ್ಟೆಯಲ್ಲಿರುವ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ವಿಶೇಷ ಮುತುವರ್ಜಿ ವಹಿಸಿ 12 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಅವರ ಗೃಹ ಕಚೇರಿಯಲ್ಲಿ ಭಟ್ಕಳ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಹಿರಿಯ ವಕೀಲ ರವೀಂದ್ರ ಶ್ರೇಷ್ಟಿ ಮಾತನಾಡಿ, ಸಚಿವರ ಸತತ ಪರಿಶ್ರಮದಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಇದು ಸಂತಸದ ಸಂಗತಿ ಎಂದರು. ಎಂ.ಎಲ್. ನಾಯ್ಕ, ಸಂಘದ ತಾಲೂಕು ಅಧ್ಯಕ್ಷ ಗಣೇಶ ದೇವಾಡಿಗ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net