

ಭಟ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ ಉತ್ತರಕನ್ನಡ, ಬೀನಾ ವೈದ್ಯ ಪಿಯು ಕಾಲೇಜು ಮುರ್ಡೇಶ್ವರ ಮತ್ತು ನ್ಯಾಷನಲ್ ಪಿಯು ಕಾಲೇಜು ಮುರ್ಡೇಶ್ವರ ಇವರ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ ಕಬಡ್ಡಿ ಪಂದ್ಯಾವಳಿ ಬೀನಾ ವೈದ್ಯ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೀನಾ ವೈದ್ಯ ಶಿಕ್ಷಣ ಸಂಸ್ಥೆ ಎಂಡಿ ಪುಷ್ಪಲತಾ ಮಂಕಾಳ ವೈದ್ಯ ಮಾತನಾಡಿ, ಕ್ರೀಡೆಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ. ಸೋಲೇ ಗೆಲುವಿನ ಮೆಟ್ಟಿಲು. ಗೆಲುವಿಗೆ ಪ್ರಯತ್ನ ಪಡದೆ ಸೋಲಬಾರದು ಎಂದರು.
ಬೀನಾ ವೈದ್ಯ ಕಾಲೇಜಿನ ಪ್ರಾಂಶುಪಾಲ ನಯೀಂ ಗೋರಿ, ಜಗನ್ನಾಥ ಗೊಂಡ, ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ಶೆಟ್ಟಿ, ಪಂದ್ಯದ ನಿರ್ಣಾಯಕ ದಿವಾಕರ ಸೀತಾರಾಮ ನಾಯ್ಕ, ಕಬಡ್ಡಿ ತೀರ್ಪುಗಾರ ಉಮೇಶ ನಾಯ್ಕ, ರಂಜಿತಾ ನಾಯ್ಕ, ರಕ್ಷಾ ನಾಯ್ಕ ಇದ್ದರು. ಶ್ವೇತಾ ಪ್ರಭು, ಶುಭಶ್ರೀ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.
ಫಲಿತಾಂಶ: ಬಾಲಕಿಯರ ವಿಭಾಗದಲ್ಲಿ ನ್ಯೂ ಇಂಗ್ಲಿಷ್ ಪಿಯು ಕಾಲೇಜು ಭಟ್ಕಳ ಪ್ರಥಮ ಸ್ಥಾನ, ಆರ್‌ಎನ್‌ಎಸ್ ಪಿಯು ಕಾಲೇಜು ಮುರ್ಡೇಶ್ವರ ತಂಡ ರನ್ನರ್‌ಅಪ್ ಆಯಿತು.
ಬಾಲಕರ ವಿಭಾಗದಲ್ಲಿ ಅಂಜುಮನ್ ಪಿಯು ಕಾಲೇಜು ಭಟ್ಕಳ ಪ್ರಥಮ. ಆರ್‌ಎನ್‌ಎಸ್ ಪಿಯು ಕಾಲೇಜು ಮುರ್ಡೇಶ್ವರ ತಂಡ ರನ್ನರ್ ಅಪ್ ಆಯಿತು.