ಭಟ್ಕಳ ಜಾತ್ರೆಗೆ ಚಾಲನೆ ಮಾರಿಯಮ್ಮನ ಮೂರ್ತಿ ಮೆರವಣಿಗೆ

12bkl1 JATRE
Published on

ಭಟ್ಕಳ: ಪಟ್ಟಣದ ಮಾರಿಗುಡಿಯಲ್ಲಿ ಬುಧವಾರ ಬೆಳಗ್ಗೆ ಮಾರಿಯಮ್ಮನ ಮೂರ್ತಿಯನ್ನು ಗದ್ದುಗೆಯಿಂದ ಮೆರವಣಿಗೆ ಮೂಲಕ ತಂದು ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಮಾರಿಜಾತ್ರೆಗೆ ಚಾಲನೆ ನೀಡಲಾಯಿತು.


ವಿಶ್ವಕರ್ಮ ಸಮಾಜದವರಿಂದ ಮಂಗಳವಾರ ರಾತ್ರಿ ತವರು ಮನೆಯ ವಿಶೇಷ ಪೂಜೆ ನಡೆಯುತ್ತದೆ. ಬುಧವಾರ ಬೆಳಗ್ಗೆ ಶ್ರೀ ಮಾರಿಕಾಂಬಾ ದೇವಿಯನ್ನು ಚಂಡೆ ವಾದ್ಯ, ನೃತ್ಯ ಮೆರವಣಿಗೆಯ ಮೂಲಕ ಗರ್ಭಗುಡಿಯ ಹೊರಗೆ ತಂದು ಪ್ರತಿಷ್ಠಾಪಿಸಲಾಯಿತು.


ತಾಲೂಕಿನ ಪ್ರಸಿದ್ಧ ಹಬ್ಬಕ್ಕೆ ಸಚಿವ ಮಂಕಾಳ ವೈದ್ಯ ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಮಾಜಿ ಶಾಸಕ ಸುನೀಲ ನಾಯ್ಕ, ಜೆ.ಡಿ. ನಾಯ್ಕ, ತಹಸೀಲ್ದಾರರು, ಉಪವಿಭಾಗಾಧಿಕಾರಿಗಳು ಸೇರಿ ಇತರರು ಬಂದು ದೇವಿಯ ದರ್ಶನ ಪಡೆದರು. ಆಗಮಿಸಿದ ಭಕ್ತರು ತಮ್ಮ ಕಷ್ಟಕಾಲದಲ್ಲಿ ಹರಕೆ ಮಾಡಿಕೊಂಡಿದ್ದ ಬೆಳ್ಳಿಯ ಕಣ್ಣುಗಳನ್ನು ಸಲ್ಲಿಸಿ ಕೃತಾರ್ಥರಾದರು.


ತಾಲೂಕಿನ ಗ್ರಾಮೀಣ ಭಾಗದ ಜನರು ಬುಧವಾರ ಹಬ ಆಚರಿಸುತ್ತಾರೆ. ಗುರುವಾರ ನಗರ ಭಾಗದ ಜನರು ಹಬ್ಬ ಆಚರಿಸುವುದು ವಾಡಿಕೆ. ಗುರುವಾರ ಸಂಜೆ 4 ಗಂಟೆಯವರೆಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿ ನಂತರ ವಿಸರ್ಜನೆ ಮಾಡಲಾಗುತ್ತದೆ. ದೇವಸ್ಥಾನದ ಟ್ರಸ್ಟಿಗಳಾದ ರಘುವೀರ ಬಾಳಗಿ, ಪರಮೇಶ್ವರ ನಾಯ್ಕ, ಶ್ರೀಧರ ನಾಯ್ಕ, ಶ್ರೀಪಾದ ಕಂಚುಗಾರ, ನರೇಂದ್ರ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net