ಭಟ್ಕಳ ಅಕ್ರಮ ಮರಳು ವಾಹನ ವಶಕ್ಕೆ

Crime
Published on

ಭಟ್ಕಳ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಶಿರಾಲಿ ಚೆಕ್‌ಪೋಸ್ಟ್ ಹತ್ತಿರ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ವಾಹನವನ್ನು ಪೊಲೀಸರು ಪತ್ತೆಹಚ್ಚಿ, ಚಾಲಕನನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಉಳ್ಳಣದ ಶಂಕರ ಅನಂತ ದೇವಡಿಗೆ ಎಂಬಾತನು ಯಾವುದೇ ಪಾಸ್ ಇಲ್ಲದೇ, ಸ್ವಂತ ಲಾಭಕ್ಕಾಗಿ ಟಾಟಾ 207 ಪಿಕಪ್ ವಾಹನದಲ್ಲಿ ಮರಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದನು. ರಾತ್ರಿ ತಪಾಸಣೆಯ ವೇಳೆ ಸಿಪಿಐ ಮಂಜುನಾಥ ಅಂಗಾರೆಡ್ಡಿ ಅವರಿಗೆ ಅನುಮಾನವಾಗಿದ್ದು, ವಾಹನ ತಪಾಸಣೆ ನಡೆಸಿದಾಗ ಅಕ್ರಮ ಮರಳು ಸಾಗಾಟ ಖಚಿತವಾಗಿದೆ.

ಮರಳು ಕಳ್ಳತನದಿಂದ ಪರಿಸರಕ್ಕೆ ಹಾನಿ ಉಂಟಾಗುವುದರೊAದಿಗೆ, ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಅಂಗಾರೆಡ್ಡಿ ಅವರ ದೂರಿನ ಮೇರೆಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net