ದೇಶ ಸೇವೆ ಪವಿತ್ರ ಕಾರ್ಯ, ಶಾರದಾ ವಿದ್ಯಾಲಯದಲ್ಲಿ ಭಾರತೀಯ ಸೇನೆಯ ಮಾಜಿ ಯೋಧ ಭಾಸ್ಕರ ರೈ ಹೇಳಿಕೆ

sharada
ಶಾರದಾ ವಿದ್ಯಾಲಯದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಮಾಜಿ ಯೋಧ ನಾಯಕ್ ಭಾಸ್ಕರ ರೈ, ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್, ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರದೀಪ ಕುಮಾರ ಕಲ್ಕೂರ, ವಿಶ್ವಸ್ಥ ಸುಧಾಕರ ರಾವ್ ಪೇಜಾವರ, ಆಡಳಿತ ನಿರ್ದೇಶಕ ಸಮೀರ್ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.
Published on

ಮಂಗಳೂರು: ಪ್ರತಿಯೊಬ್ಬರಲ್ಲೂ ಒಬ್ಬ ಸೈನಿಕನಿದ್ದಾನೆ. ಸೈನಿಕರು ಹೇಗೆ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಶೌರ್ಯ ಪ್ರದರ್ಶಿಸುತ್ತಾರೋ ಅದೇ ರೀತಿ ವಿದ್ಯಾರ್ಥಿಗಳು ಕೂಡ ಎಲ್ಲ ಸಂದರ್ಭದಲ್ಲೂ ನಾನೊಬ್ಬ ವೀರನೆಂಬ ಸೈನಿಕ ಮನಸ್ಥಿತಿ ಹೊಂದಬೇಕು. ದೇಶ ಸೇವೆಯ ಪವಿತ್ರ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು ಎಂದು ಭಾರತೀಯ ಸೇನೆಯ ಮಾಜಿ ಯೋಧ ನಾಯಕ್ ಭಾಸ್ಕರ ರೈ ಹೇಳಿದರು.

ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇತ್ತೀಚೆಗೆ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರದೀಪ ಕುಮಾರ ಕಲ್ಕೂರ, ವಿಶ್ವಸ್ಥ ಸುಧಾಕರ ರಾವ್ ಪೇಜಾವರ, ಆಡಳಿತ ನಿರ್ದೇಶಕ ಸಮೀರ್ ಪುರಾಣಿಕ್, ಶಾರದಾ ವಿದ್ಯಾಲಯ ಹಿರಿಯ ಪ್ರಾಂಶುಪಾಲೆ ಸುನೀತಾ ವಿ.ಮಡಿ, ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಮಹಾಬಲೇಶ್ವರ ಭಟ್, ವಿದ್ಯಾಲಯದ ಆಡಳಿತ ಪ್ರಾಂಶುಪಾಲ ದಯಾನಂದ ಕಟೀಲ್, ಎನ್‌ಸಿಸಿ ಅಧಿಕಾರಿ ರತ್ನಾಕರ್ ಉಪಸ್ಥಿತರಿದ್ದರು.

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಸೈನಿಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಎನ್‌ಸಿಸಿ ವಾರ್ಷಿಕ ಶಿಬಿರದಲ್ಲಿ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ಕೆಡೆಟ್‌ಗಳಿಗೆ ಬಹುಮಾನ ವಿತರಿಸಲಾಯಿತು. ಶಿವಾನಿ ಮಯ್ಯ ವಿಜೇತರ ವಿವರ ನೀಡಿದರು. ಸ್ವಸ್ತಿಶ್ರೀ ಶೆಟ್ಟಿ ಕಾರ್ಗಿಲ್ ಯುದ್ಧದ ಪ್ರೇರಣಾದಾಯಕ ಘಟನೆಗಳನ್ನು ವಿವರಿಸಿದರು. ಐಷಾನಿ ಶೆಟ್ಟಿ ಸ್ವಾಗತಿಸಿ, ತನ್ಮಯ್ ಗಟ್ಟಿ ವಂದಿಸಿದರು. ದಿಯಾ ಡಿ. ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಸೈನಿಕರ ಶಿಸ್ತು, ದೇಶಭಕ್ತಿ, ಸಾಹಸ, ಕರ್ತವ್ಯ ನಿಷ್ಠೆಗಳಿಂದ ಕಾರ್ಗಿಲ್ ಯುದ್ಧದಲ್ಲಿ ನಾವು ಜಯ ಸಾಧಿಸಿದೆವು. ವಿದ್ಯಾರ್ಥಿಗಳು ಕೂಡ ನಮ್ಮ ಸೈನಿಕರ ಆದರ್ಶಗಳನ್ನು ಜೀವನದಲ್ಲಿ ಅನುಕರಿಸಿ ರಾಷ್ಟ್ರಕ್ಕೆ ಕೀರ್ತಿ ತರುವಂತವರಾಗಬೇಕು. ದೇಶಸೇವೆಯ ಪವಿತ್ರ ಕಾರ್ಯದಲ್ಲಿ ಎಲ್ಲರೂ ಭಾಗಿಗಳಾಗಬೇಕು.

ಎಂ.ಬಿ ಪುರಾಣಿಕ್, ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net