100 ಕೋಟಿ ರೂ. ಅಕ್ರಮ ಹಣದ ಬಗ್ಗೆ ಉತ್ತರಿಸಲು ಸಚಿವರು ಹಿಂದೇಟು!

IMG-20231102-WA0024.jpg
Published on


- ಭಾಸ್ಕರ್ ರಾವ್ ವಾಗ್ದಾಳಿ
ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರ‌ ನುಡಿದಂತೆ ನಡೆಯುತ್ತಿಲ್ಲ. ತೀವ್ರ ಬರ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ರಾಜ್ಯ ಸರ್ಕಾರ ಆಡಳಿತ ನಡೆಸಲು ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಭಾಸ್ಕರ್ ರಾವ್ ವಾಗ್ದಾಳಿ‌ ನಡೆಸಿದರು.
ನಗರದ ‌ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ‌ಪತ್ತೆಯಾಗಿರುವ ಅಕ್ರಮ ಹಣದ ಬಗ್ಗೆ ಉತ್ತರಿಸಲು ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಬರ‌  ನಿರ್ವಹಣೆಕ್ಕಿಂತ ಪಂಚರಾಜ್ಯ ಚುಮಾವಣೆ ಮುಖ್ಯವಾಗಿದೆ ಎಂದು ವಾಗ್ದಾಳಿ‌ ನಡೆಸಿದರು.
136ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಲ್ಲೇ ಆಂತರಿಕ ಕಿತ್ತಾಟ ಆರಂಭವಾಗಿದೆ. ಇನ್ನೂ‌4 ವರ್ಷ ಅಧಿಕಾರ ಹೇಗೆ‌ ನಡೆಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net