ದ್ವಾದಶ ಜ್ಯೋತಿರ್ಲಿಂಗ ದರ್ಶನ

23ravig5-Web
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವತಿಯಿಂದ ರಾಣಿ ಚನ್ನಮ್ಮ ನಗರದಲ್ಲಿ ಏರ್ಪಡಿಸಿದ್ದ ದ್ವಾದಶ ಜ್ಯೋತಿರ್ಲಿಂಗ ದರ್ಶನ ಹಾಗೂ ಕಾರ್ಯಕ್ರಮವನ್ನು ವಡೆಯರಟ್ಟಿಯ ನಾರಾಯಣ ಶರಣರು ಹಾಗೂ ಕಾರಂಜಿಮಠದ ಶ್ರೀಗುರುಸಿದ್ಧ ಸ್ವಾಮೀಜಿ ಉದ್ಘಾಟಿಸಿದರು. ರಾಜಯೋಗಿನಿ ಅಂಬಿಕಾ, ಎಂ.ಬಿ. ಜಿರಲಿ, ರಾಜಣ್ಣ ಹುಲಬತ್ತಿ, ಅಶೋಕ ಮುನ್ನೋಳಿ, ಬಿ.ಕೆ. ಭಾರತಿ ಇದ್ದರು.
Published on

ಬೆಳಗಾವಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಇತ್ತೀಚೆಗೆ ರಾಣಿ ಚನ್ನಮ್ಮ ನಗರದಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಡೆಯರಟ್ಟಿಯ ನಾರಾಯಣ ಶರಣರು ಕಾರ್ಯಕ್ರಮ ಉದ್ಘಾಟಿಸಿದರು. ಕಾರಂಜಿಮಠದ ಶ್ರೀಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜಯೋಗಿನಿ ಬ್ರಹ್ಮಕುಮಾರಿ ಅಂಬಿಕಾ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ವಕೀಲ ಎಂ.ಬಿ. ಜಿರಲಿ, ಮಾಜಿ ನಗರ ಸೇವಕ ರಾಜಣ್ಣ ಹುಲಬತ್ತಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಅಶೋಕ ಮುನ್ನೋಳಿ, ಬಿ.ಕೆ. ಭಾರತಿ, ಬಿ.ಕೆ. ಶೋಭಾ ಇತರರು ಇದ್ದರು. ಬಿ.ಕೆ. ಪಾರ್ವತಿ ಸ್ವಾಗತಿಸಿದರು. ಬಿ.ಕೆ. ವಿದ್ಯಾ ಅಕ್ಕನವರು ನಿರೂಪಿಸಿದರು. ಬಿ.ಕೆ. ರಾಜು ರಾಜಮಾನೆ ವಂದಿಸಿದರು. ಮಹಾಶಿವರಾತ್ರಿ ಅಂಗವಾಗಿ ಅನಗೋಳ ಕಲ್ಮೇಶ್ವರ ಮಂದಿರದಲ್ಲಿ ನವಧಾನ್ಯಗಳ ಶಿವಲಿಂಗ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಜರುಗಿತು. ಸಿಟಿ ಸೆಂಟರ್ ವತಿಯಿಂದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸೋಮನಾಥ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ, ಶಾಹೂ ನಗರದಲ್ಲಿ ನವರತ್ನ ಶಿವಲಿಂಗ ದರ್ಶನ ಏರ್ಪಡಿಸಲಾಗಿತ್ತು. ಭಕ್ತರು, ಸಾರ್ವಜನಿಕರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net