ಭರಮಸಾಗರದಲ್ಲಿ ಹನುಮ ಜಯಂತಿ

BRM HANUMAN 08 (2)
Published on

ಭರಮಸಾಗರ: ದೊಡ್ಡಕೆರೆ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಮನೆಗಳಲ್ಲಿ ಬುಧವಾರ ಸರಳವಾಗಿ ಹನುಮ ಜಯಂತಿ ಆಚರಿಸಲಾಯಿತು.

ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಪವಮಾನ ಸೇವೆ ಹಾಗೂ ವೀಳ್ಯದೆಲೆಯ ಅಲಂಕಾರ ಮಾಡಲಾಯಿತು. ಮನೆಗಳಲ್ಲಿ ಹನುಮಾನ್ ಭಾವಚಿತ್ರಕ್ಕೆ ಪೂಜಿಸಿ ಭಕ್ತಿ ಸಮರ್ಪಿಸಿದರು.

ದುಷ್ಟಶಕ್ತಿಗಳು ಮತ್ತು ಪಾಪಗಳ ವಿರುದ್ಧ ಜಯ ಸಾಧಿಸಲು ಹನುಮಂತನ ಪ್ರಾರ್ಥನೆ ಮಾಡುವುದು ಬಹಳ ಹಿಂದಿನಿಂದ ನಡೆದು ಬಂದ ಸಂಪ್ರದಾಯ ಎಂದು ವಿಪ್ರಸಮಾಜದ ಹಿರಿಯರೊಬ್ಬರು ತಿಳಿಸಿದರು. ಅರ್ಚಕ ವಿಜಯಕುಮಾರ್ ಪೂಜಾ ಕೈಂಕರ್ಯ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net