ಬುಡರನಾಳಲ್ಲಿ ಹುಂಡಿ ಹಣ ಕಳವು

BRM HUNDI 14 (1)
Published on

ಭರಮಸಾಗರ: ಗ್ರಾಮದ ಬೈಪಾಸ್ ರಸ್ತೆಯ ಬುಡರನಾಳು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ದುಷ್ಕರ್ಮಿಗಳು ದೇಗುಲದ ಹುಂಡಿ ಒಡೆದು ಹಣ ಕಳವು ಮಾಡಿದ್ದಾರೆ ಎಂದು ಪೊಲಿಸರು ಶನಿವಾರ ತಿಳಿಸಿದ್ದಾರೆ.

ದೇವಸ್ಥಾನದ ಅರ್ಚಕರು ಗುರುವಾರ ಸಂಜೆ ಪೂಜೆ ಮುಗಿಸಿ ದೇಗುಲಕ್ಕೆ ಬೀಗ ಹಾಕಿ ಮನೆಗೆ ಹೋಗಿದ್ದರು. ಶುಕ್ರವಾರ ಬೆಳಗ್ಗೆ 6ಕ್ಕೆ ಪೂಜೆಗಾಗಿ ಬೀಗ ತೆಗೆಯಲು ಹೋದಾಗ ಕಬ್ಬಿಣದ ಗ್ರಿಲ್ ತುಂಡಾಗಿತ್ತು. ಒಳಗಿದ್ದ ದೇವರ ಕಾಣಿಕೆ ಹುಂಡಿ ಹೊರಗಿರುವುದನ್ನು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನ ಮತ್ತು ಬೆರಳಚ್ಚು ತಜ್ಞರು ಆಗಮಿಸಿ, ಪರಿಶೀಲಿಸಿದ್ದಾರೆ. ಭರಮಸಾಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net