ಭರಮಸಾಗರದಲ್ಲೂ ಪ್ರತಿಭಟನೆ

BMS STUDNET 16 (1)
Published on

ಭರಮಸಾಗರ: ಲ್ಯಾಪ್‌ಟ್ಯಾಪ್ ವಿತರಿಸುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜಿನ ದ್ವಿತೀಯ ಹಾಗೂ ಅಂತಿಮ ತರಗತಿ ವಿದ್ಯಾರ್ಥಿಗಳು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ನಾಡ ಕಚೇರಿ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

2017-18ನೇ ಸಾಲಿನಲ್ಲಿ ಪ್ರಥಮ ಪದವಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ನೀಡಿಲ್ಲ. ಎಲ್ಲರಿಗೂ ನೀಡುವುದಾಗಿ ಹೇಳಿ ದಾಖಲೆ ಪಡೆಯಲಾಗಿತ್ತು. ಈಗ ಪ್ರಸ್ತುತ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ನೀಡುವುದಾಗಿ ಸರ್ಕಾರ ಹೇಳಿದೆ. ಇದರಿಂದ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net