

ಭರಮಸಾಗರ: ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಜಿಲ್ಲಾ ಪಂಚಾಯಿತಿ ಇಂಜನಿಯರಿಂಗ್ ವಿಭಾಗದಿಂದ 15 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಕಾಮಗಾರಿಗಳಿಗೆ ಗ್ರಾಮದಲ್ಲಿ ಶಾಸಕ ಎಂ.ಚಂದ್ರಪ್ಪ ಮಂಗಳವಾರ ಚಾಲನೆ ನೀಡಿದರು.
ಬಳಿಕೆ ಮಾತನಾಡಿ, ಮತ ಕೊಟ್ಟ ಜನರಿಗೆ ನೀಡಿದ ಭರವಸೆ ಈಡೇರಿಸುತ್ತಿದ್ದೇನೆ. ಭರಮಸಾಗರ ಜಿಪಂ ಕ್ಷೇತ್ರ ವ್ಯಾಪ್ತಿಗೆ 9.5 ಕೋಟಿ ರೂ. ಅನುದಾನ ನೀಡಲಾಗಿದೆ. ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಮಾಡಬೇಕು. ಈ ಬಗ್ಗೆ ಸಾರ್ವಜನಿಕರು ಸಹ ನಿಗಾವಹಿಸಬೇಕು ಎಂದರು.
ಎಲ್ಲೆಲ್ಲಿ ಏನು ಕೆಲಸ: ಹೋಬಳಿಯ ಬೇಡರ ಶಿವನಕೆರೆ-ಬಸವನ ಶಿವನಕೆರೆ ರಸ್ತೆ, ಬ್ಯಾಲಾಳು, ಚಿಕ್ಕಬೆನ್ನೂರು, ಕಾಲ್ಗೆರೆ-ಕರಿಯಮ್ಮನಹಳ್ಳಿ, ಚೌಲೀಹಳ್ಳಿ ಗೊಲ್ಲರಹಟ್ಟಿ-ಕೋಡಿಹಳ್ಳಿ, ಹೆಗ್ಗೆರೆ-ಹಂಪನೂರು, ಪಂಜಯ್ಯನಹಟ್ಟಿ ರಸ್ತೆಗಳನ್ನು ತಾಂಡಾ ಅಭಿವೃದ್ಧಿ ಯೋಜನೆಯಡಿ ಡಾಂಬರೀಕರಣ. ಭರಮಸಾಗರದ ದೊಡ್ಡಪೇಟೆ, ಇಂದಿರಾ ಕಾಲನಿ, ಚಿಕ್ಕಪೇಟೆ, ದೊಡ್ಡಕೆರೆ ರಸ್ತೆ, ಹನುಮನಹಳ್ಳಿ, ಭ. ಗೊಲ್ಲರಹಟ್ಟಿ,ನಂದೀಹಳ್ಳಿ, ಕೊಳಹಾಳು, ಚೌಲೀಹಳ್ಳಿ ಗೊಲ್ಲರಹಟ್ಟಿ, ಇಸಾಮುದ್ರ ಗೊಲ್ಲರಹಟ್ಟಿಗಳಲ್ಲಿ ಸಿಸಿ ರಸ್ತೆ. ಇಸಾಮುದ್ರ, ಗೊಲ್ಲರಹಟ್ಟಿ-ಅರಳಿಕಟ್ಟೆ, ಬಸವನ ಶಿವನಕೆರೆ-ಬ್ಯಾಲಾಳು ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.
ಜಿಪಂ ಸದಸ್ಯ ಡಿ.ವಿ.ಶರಣಪ್ಪ, ತಾಪಂ ಸದಸ್ಯ ಎನ್.ಕಲ್ಲೇಶ್, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್, ಮಾಜಿ ಅಧ್ಯಕ್ಷ ಸಾಮಿಲ್ ಶಿವಣ್ಣ, ಎಮ್ಮನಘಟ್ಟ ಶಿವಣ್ಣ, ಸಿ.ಟಿ.ಮಹಾಂತೇಶ್, ಡಿ.ಎಸ್.ಪ್ರದೀಪ್, ಮುರುಗೇಶ್, ವಿ.ಆರ್.ತಿಪ್ಪೇಸ್ವಾಮಿ, ಯಲ್ಲಪ್ಪ, ಗುತ್ತಿಗೆದಾರ ಬಲರಾಮರೆಡ್ಡಿ, ಬಸವನ ಶಿವನಕೆರೆ ಸಿದ್ದಬಸಪ್ಪ, ಬಸವರಾಜಪ್ಪ, ಸಹಾಯಕ ಮುಖ್ಯ ಇಂಜಿನಿಯರ್ ಕೃಷ್ಣಪ್ಪ, ಜಿಪಂ ಸಹಾಯಕ ಮುಖ್ಯ ಇಂಜಿನಿಯರ್ ವೀರಪ್ಪ, ಇಂಜಿನಿಯರಾದ ನಟೇಶ್, ಜಯ್ಯಣ್ಣ, ಇಒ ಕೃಷ್ಣನಾಯಕ್ ಇತರರಿದ್ದರು.