ಭರಮಸಾಗರದಲ್ಲಿ ಜಾಗೃತಿ ಬೈಕ್ ರ‌್ಯಾಲಿ

BRM POLICE 16
Published on

ಭರಮಸಾಗರ: ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಕರೊನಾ ಜಾಗೃತಿ ಬೈಕ್ ರ‌್ಯಾಲಿಗೆ ಬುಧವಾರ ವೃತ್ತ ನಿರೀಕ್ಷಕ ಗಿರೀಶ್ ಚಾಲನೆ ನೀಡಿದರು.

ಅನಗತ್ಯವಾಗಿ ಯಾರೂ ಹೊರಗಡೆ ಓಡಾಡಬಾರದು. ಬ್ಯಾಂಕ್, ನ್ಯಾಯಬೆಲೆ ಅಂಗಡಿ ಇನ್ನಿತರೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಖಕ್ಕೆ ತಪ್ಪದೇ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು. ಪಿಎಸ್‌ಐ ರಾಜು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net