ಭಾರತೀಯ ವಿದ್ಯಾ ಭವನದ ವಿದ್ಯಾರ್ಥಿಗಳ ಸಾಧನೆ

mng-15jan-vidya bhavana
Published on


ಮಂಗಳೂರು : ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ
ಜೂನಿಯರ್ ಪರೀಕ್ಷೆಯಲ್ಲಿ ಭಾರತೀಯ ವಿದ್ಯಾ ಭವನ ಮಂಗಳೂರು ಇಲ್ಲಿಯ ವಿದ್ಯಾರ್ಥಿನಿಯರಾದ ಸೌಜನ್ಯ ಎಂ. ಪ್ರಭು ( ಶೇ.94.25), ಶ್ರಾವ್ಯ .ಆರ್. ರಾಜ್ ( ಶೇ.89.5), ರಾಶಿ ಯು. ಶೆಟ್ಟಿ ( ಶೇ.88), ವೈಷ್ಣವಿ ಎಂ. ಆರ್ . (ಶೇ.86.5), ಚೈತ್ರ ಆರ್. ನಾಯ್ಕ್ (ಶೇ.85.5), ಸಾನ್ವಿ ಎಂ. ಕುಲಾಲ್ (77.5) ಇವರು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಸಂಧ್ಯಾ ಗಣೇಶ್ ಅವರ ಶಿಷ್ಯೆಯಂದಿರು.
ಹಿಂದೂಸ್ತಾನಿ ತಾಳವಾದ್ಯ (ತಬಲಾ) ಜೂನಿಯರ್ ಪರೀಕ್ಷೆಯಲ್ಲಿ ಕೆ. ಶ್ರೇಯಾಂಕ್ ಹಾಗೂ ಸಾಕ್ಷತ್. ಆರ್. ಉಳ್ಳಾಲ್ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ದೇವದತ್ತ ಪ್ರಭು ಅವರ ಶಿಷ್ಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net