ಸೇಡಂನಲ್ಲಿ ಒಂಬತ್ತು ದಿನಗಳ 'ಭಾರತೀಯ ಸಂಸ್ಕೃತಿ ಉತ್ಸವ' ಜ.೨೯ ರಿಂದ : ಬಸವರಾಜ ಪಾಟೀಲ್

IMG-20240809-WA0014
Published on

ಕಲಬುರಗಿ: ಪ್ರಕೃತಿಯಿಂದ ಸಂಸ್ಕೃತಿಯ ಕಡೆಗೆ ಎಂಬ ಘೋಷವಾಕ್ಯದೊಂದಿಗೆ "ಭಾರತೀಯ ಸಂಸ್ಕೃತಿ ಉತ್ಸವ"-೭ವನ್ನು ೨೦೨೫ ಜನೇವರಿ ೨೯ ರಿಂದ ೬ ವರಗೆ ಸೇಡಂ ಹೊರವಲಯದ ಬೀರನಳ್ಳಿ ರಸ್ತೆಯಲ್ಲಿ ಇರುವ ಪ್ರಕೃತಿ ನಗರದಲ್ಲಿ ಆಯೋಜಿಸಲಾಗುತ್ತಿದೆ ಎಂದು ಭಾರತ ವಿಕಾಸ ಸಂಗಮ, ವಿಕಾಸ ಅಕಾಡೆಮಿ ಅಧ್ಯಕ್ಷರಾದ ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಅವರು ತಿಳಿಸಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೯ ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮ ಕುಂಭಮೇಳ ನಂತರ ನಡೆಯಲಿರುವ ಅತಿದೊಡ್ಡ ಸಮಾಜಮುಖಿ ಕಾರ್ಯಕ್ರಮ ಇದಾಗಲಿದೆ ಎಂದರು.

ರಾಷ್ಟ್ರಪತಿಗಳು, ಪ್ರಧಾನಿ, ಉಪರಾಷ್ಟ್ರಪತಿ ಸೇರಿದಂತೆ ಅನೇಕ ಗಣ್ಯರನ್ನು, ಅಸಾಧಾರಣ ವ್ಯಕ್ತಿಗಳನ್ನು ಆಹ್ವಾನಿಸಲು ಚಿಂತನೆ ನಡೆದಿದೆ. ಚಿಂತಕ ಗೋವಿಂದಾಚಾರ್ಯ ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ದೇಶ ವಿದೇಶಗಳ ಸುಮಾರು ೩೦ ಲಕ್ಷ ಜನರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ೮೦೦ ಮಳಿಗೆಗಳು ಇರಲಿದ್ದು, ಸುಮಾರು ೫೦೦ ಕೋಟಿ ರೂ.‌ಮೊತ್ತದ ಸಾಹಿತ್ಯ ಮಾರಾಟ ಗುರಿ ಹೊಂದಲಾಗಿದೆ. ‌ಕಾರ್ಯಕ್ರಮ ಬಳಿಕ ಅದರ ಸಮಗ್ರ ಚಿತ್ರಣ ಹೊಂದಿರುವ ಕೃತಿಗಳನ್ನು ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಮುದ್ರಿಸಿ ವಿತರಿಸಲಾಗುವುದು ಎಂದು ಸೇಡಂ ತಿಳಿಸಿ ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net