

ಕಲಬುರಗಿ: ಸಂಸ್ಕೃತಿ, ಸಶಕ್ತೀಕರಣ, ಸಾಂಸ್ಕೃತಿಕ ವೈಭವದೊಂದಿಗೆ ಸಾಮಾಜಿಕ ಜಾಗೃತಿಯ ಭವ್ಯ ಶೋಭಾಯಾತ್ರೆಯೂ ಸಹಸ್ರಾರು ಮಕ್ಕಳು, ಸಾರ್ವಜನಿಕರ ಹೆಜ್ಜೆಯೊಂದಿಗೆ ಸಾಗಿ ೭ನೇ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಕಲಬುರಗಿ ಮತ್ತು ಸೇಡಂನಲ್ಲಿ ಅದ್ದೂರಿ ಮುನ್ನಡಿ ಏಕಕಾಲಕ್ಕೆ ಬರೆಯಿತು.
ಸೇಡಂ ತಾಲೂಕಿನ ನೀಲಹಳ್ಳಿ- ಬೀರನಹಳ್ಳಿ ಕ್ರಾಸ್ ಬಳಿಯ ಕಾಗಿಣಾ ನದಿ ತಟದ ಪ್ರಕೃತಿ ನಗರದಲ್ಲಿ ಜ.೨೯ರಿಂದ ಫೆ.೬ರವರೆಗೆ ನಡೆಯಲಿರುವ ಕೊತ್ತಲ ಸ್ವರ್ಣ, ಭಾರತೀಯ ಸಂಸ್ಕೃತಿ ಉತ್ಸವದ ಮುನ್ನಾ ದಿನ ಎರಡು ಕಡೆ ಏಕಕಾಲಕ್ಕೆ ಚಾಲನೆ ನೀಡಿ, ಸಾಂಸ್ಕೃತಿಕ ಮೆರಗಿನೊಂದಿಗೆ ಸಾಮಾಜಿಕ ಸಂದೇಶ ಸಾರಿತು.
ನಗರೇಶ್ವರ ಶಾಲೆಯಿಂದ ಆರಂಭವಾಗಿ ನೂತನ ವಿದ್ಯಾಲಯ ಮೈದಾನದವರೆಗೆ ನಡೆದ ಭವ್ಯ ಶೋಭಾಯಾತ್ರೆಯಲ್ಲಿ ಕಲಬುರಗಿ ನಗರದ ಸುಮಾರು ಏಳು ಸಾವಿರ ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಮೊಳಗಿಸಿದರು. ಸಂಸ್ಕೃತಿ, ಇತಿಹಾಸ, ಧರ್ಮ, ಸಾಮಾಜಿಕ ಸಂದೇಶ ಸಾರುವ ಸ್ತಬ್ಧ ಚಿತ್ರಗಳು, ಛದ್ಮವೇಷ ಧರಿಸಿದ ಮಕ್ಕಳು ಮೆರವಣಿಗೆಯ ಗಮನ ಸೆಳೆದರು.
ತಿರುಪತಿ ವೆಂಕಟರಮಣ, ಸಾಧುಗಳು ಶರಣರು ಸಂತರ ವೇಷಭೂಷಣಗಳು, ಭಾರತ ಮಾತೆಯ ರಥ, ಡೊಳ್ಳು ಮೇಳ, ಲಂಬಾಣಿ ನೃತ್ಯತಂಡ, ಪುರವಂತಿಕೆ ತಂಡಗಳು, ಹಲಿಗೆ ಮೇಳದ ತಂಡಗಳು, ಗೋಂದಳಿ ತಂಡ, ೨೦ಕ್ಕೂ ಹೆಚ್ಚು ಲೇಜಿಮ್ ತಂಡ, ಎಂಟು ಘೋಷ ವಾದ್ಯ ತಂಡಗಳ ಸುಸ್ಸಜ್ಜಿತವಾದ ನಿನಾಧ ಎಲ್ಲೆಡೆ ಮೊಳಗಿತು.
ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಾಳೆಹಣ್ಣು, ನೀರು, ಮಜ್ಜಿಗೆ ಒದಗಿಸಲಾಗಿತ್ತು. ಶೋಭಾಯಾತ್ರೆಗೆ ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಅಪ್ಪ, ಬಸವರಾಜ ದೇಶಮುಖ, ಶಾಸಕ ಬಸವರಾಜ ಮತ್ತಿಮಡು, ಶಿಕ್ಷಣತಜ್ಞ ಡಾ.ಗುರುರಾಜ ಕರ್ಜಗಿ, ಹರ್ಷಾನಂದ ಗುತ್ತೇದಾರ, ಚಂದು ಪಾಟೀಲï ಭಾರತ ಮಾತಯೆಗೆ ಪುಷ್ಪ ನಮನ ಸಲ್ಲಿಸಿ, ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಮಾರ್ತಾಂಡ ಶಾಸ್ತಿç, ಶೇಷಾದ್ರಿ, ಉಮೇಶ ಶೆಟ್ಟಿ, ಅಶೋಕ ಜೀವಣಗಿ, ವಿ.ಶಾಂತರೆಡ್ಡಿ, ವಿಶ್ವನಾಥ ಸ್ವಾಮಿ, ಬಾಬುರಾವ ಹಾಗರಗುಂಡಗಿ, ಅಶ್ವಿನಕುಮಾರ ಇತರರಿದ್ದರು.
ಪುಷ್ಪವೃಷ್ಟಿಯ ಸ್ವಾಗತ, ಪೊಲೀಸ್ ಸಾಥ್: ಮೆರವಣಿಗೆಯೂ ನಗರೇಶ್ವರ ಶಾಲೆ ಬಳಿ ಆರಂಭವಾಗಿ ಸೂಪರ್ ಮಾರ್ಕೆಟ್, ಜಗತ್, ಗೋವಾ ಹೊಟೇಲ್ ಮಾರ್ಗವಾಗಿ ನೂತನ ವಿದ್ಯಾಲಯ ಮೈದಾನದಲ್ಲಿ ಸಂಪನ್ನಗೊAಡಿತು. ಮಾರ್ಗ ಮಧ್ಯೆ ಸಾರ್ವಜನಿಕರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಪುಷ್ಪವೃಷ್ಟಿಯನ್ನು ಸುರಿಸಿ, ಸಂಭ್ರಮಿಸಿದರು. ಅಲ್ಲಲ್ಲಿ ಛದ್ಮವೇಷಧಾರಿ ವಿದ್ಯಾರ್ಥಿಗಳು ಗಮನ ಸೆಳೆದರು. ಇಡೀ ಮೆರವಣಿಗೆ ಮಾರ್ಗದಲ್ಲಿ ಎಲ್ಲೂ ಸಂಚಾರ ದಟ್ಟಣೆ ಆಗದಂತೆ ಪೊಲೀಸರು ಯಶಸ್ವಿಯಾಗಿ ನಿರ್ವಹಿಸಿದರು.