ರಂಗಪ್ರವೇಶಕ್ಕೆ ಅಣಿಯಾದ ಸ್ಫೂರ್ತಿ ಭಟ್

spoorthi s bhat 1.jpg 22
Published on

ಮೈಸೂರು: ನೃತ್ಯ ವಿದುಷಿ ಡಾ.ಕೃಪಾ ಫಡ್ಕೆ ಅವರ ಶಿಷ್ಯೆ ಸ್ಫೂರ್ತಿ ಎಸ್.ಭಟ್ ‘ಭರತನಾಟ್ಯ ರಂಗಪ್ರವೇಶ’ ಮಾಡಲು ಅಣಿಯಾಗಿದ್ದಾರೆ. ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರವು ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಮಾರ್ಚ್ 13 ರಂದು ಸಂಜೆ 6ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸ್ಫೂರ್ತಿ ವಿವಿಧ ನೃತ್ಯಬಂಧಗಳನ್ನು ಪ್ರಸ್ತುತ ಪಡಿಸಲಿದ್ದಾರೆ.


ಚಾರ್ಟರ್ಡ್ ಅಕೌಂಟೆಂಟ್ ವೈ.ಸುಬ್ರಹ್ಮಣ್ಯ ಭಟ್ ಮತ್ತು ಜ್ಯೋತಿ ಭಟ್ ದಂಪತಿ ಪುತ್ರಿ ಸ್ಫೂರ್ತಿ ಬಹುಮುಖ ಕಲಾವಿದೆ. ಸದ್ಯ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ.


ಕಿರಿಯ ವಯಸ್ಸಿನಿಂದಲೂ ನೃತ್ಯ, ಸಂಗೀತದಲ್ಲಿ ಸ್ಫೂರ್ತಿಗೆ ವಿಶೇಷ ಆಸಕ್ತಿ. ಏಳನೇ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸವನ್ನು ವಿದುಷಿ ಸಿ.ಎನ್ .ಅನಿತಾ ಅವರಲ್ಲಿ ಪ್ರಾರಂಭಿಸಿ ನಂತರ ನೃತ್ಯ ಲೋಕದ ಖ್ಯಾತ ಕಲಾವಿದೆ, ಗುರು ವಿದುಷಿ ಡಾ.ಕೃಪಾ ಫಡ್ಕೆ ಅವರಲ್ಲಿ ಮುಂದುವರಿಸಿ ವಿದ್ವತ್ ಅಂತಿಮ ಪರೀಕ್ಷೆಯನ್ನು ಪೂರ್ಣಗೊಳಿಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.


ಭರತನಾಟ್ಯವಲ್ಲದೇ ಸಂಗೀತದಲ್ಲೂ ಆಸಕ್ತಿ ಹೊಂದಿರುವ ಸ್ಫೂರ್ತಿ ವಾಣಿಶ್ರೀ ಎನ್. ಮೂರ್ತಿಯವರಲ್ಲಿ ಅಭ್ಯಾಸ ಪ್ರಾರಂಭಿಸಿ, ನಂತರ ರಾಜಲಕ್ಷ್ಮೀ ಮೋಹನ್ ಬಳಿ ಕಲಿಕೆ ಮುಂದುವರಿಸಿ ಜೂನಿಯರ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ವಿದುಷಿ ಗಾಯತ್ರಿ ಅರುಣ್ ಅವರಲ್ಲಿ ಅಭ್ಯಾಸವನ್ನು ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net