

ಗುರುಪುರ: ಶಾಸಕ ವೇದವ್ಯಾಸ ಕಾಮತ್ ಜನಪರ ಕೆಲಸಗಳನ್ನು ಸಹಿಸಲಾಗದ ಕಾಂಗ್ರೆಸ್, ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹತ್ತಿರ ಬರುತ್ತಲೇ ಅವರ ಹೆಸರಿಗೆ ಧಕ್ಕೆ ತರಲೆಂದು ಹಲ್ಲೆ ಪ್ರಕರಣ ಸೃಷ್ಟಿಸಿ ಸುಳ್ಳು ಪ್ರಕರಣ ದಾಖಲಿಸಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಆರೋಪಿಸಿದರು.
ಶಕ್ತಿನಗರದ ಘಟನೆಗೆ ಸಂಬಂಧಿಸಿದಂತೆ ಶಾಸಕರು ಬಂದಾಗ ಅವರ ಬೆಂಬಲಿಗರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಪರಿಶಿಷ್ಟ ಜಾತಿ ಕಾರ್ಯಕರ್ತ ದೂರು ನೀಡಿದಾಗ, ವಿಚಲಿತಗೊಂಡ ಕಾಂಗ್ರೆಸ್ ತಾನೂ ಒಂದು ನಕಲಿ ಪ್ರಕರಣ ಸೃಷ್ಟಿ ಕೇಸು ದಾಖಲಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಶಾಸಕರ ಸಹಿತ ಬಿಜೆಪಿ ಪ್ರಮುಖರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಕೆಲಸವಾಗುತ್ತಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಎಚ್ಚರಿಸಿದರು.