ಭಾರತ್ ಬೀಡಿ ವರ್ಕ್ಸ್ ಸಂಸ್ಥೆಯ ಸ್ಥಾಪನಾ ದಿನಾಚರಣೆ

mng-30july-bharath
Published on



ಮಂಗಳೂರು : ಪ್ರಖ್ಯಾತ 30 ಮಾರ್ಕಿನ ಬೀಡಿಗಳ ತಯಾರಕರಾದ ಭಾರತ್ ಬೀಡಿ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಇದರ 94ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಗರದ ಕದ್ರಿ ರಸ್ತೆಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಿತು.
ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಸುಬ್ರಾಯ ಎಂ. ಪೈ ಅವರು ಸಂಸ್ಥೆಯು ನಡೆದು ಬಂದ ದಾರಿಯ ವಿವರಣೆ ನೀಡಿ 94 ವರ್ಷಗಳ ಹಿಂದೆಯೇ ಸಂಸ್ಥೆಯ ಸಂಸ್ಥಾಪಕರಾದ ಮಂಜುನಾಥ ಪೈ ಅವರು ಮನೆಯಿಂದಲೇ ಕಾಯಕ ಎನ್ನುವುದನ್ನು ಅನುಷ್ಠಾನಗೊಳಿಸಿದ್ದರು ಎಂದರು.
ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ನಾಗೇಂದ್ರ ಡಿ ಪೈ, ವೆಂಕಟೇಶ ಎಂ. ಪೈ, ಸಂಸ್ಥೆಯ ಅಂತಾರಾಷ್ಟ್ರೀಯ ವ್ಯವಹಾರ ಸಂಬಂಧಗಳ ಅಧಿಕಾರಿ ಅಭಿಷೇಕ್ ಎನ್. ಪೈ ಮತ್ತು ಭಾರತ್ ಆಟೋ ಕಾರ್ಸ್‌ನ ಸುಧೀರ್ ಎಂ. ಪೈ ಉಪಸ್ಥಿತರಿದ್ದರು.
ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಸುಧಾಕರ ಕೊಟ್ಟಾರಿ, ಯೂನಿಯನ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ರಾಜಮಣಿ, ಐಸಿಐಸಿಐ ಬ್ಯಾಂಕಿನ ಮಂಗಳೂರು ಮೈನ್ ಶಾಖೆಯ ವ್ಯವಸ್ಥಾಪಕ ಕ್ರಿಸ್ಟೋಫರ್, ಚಿನ್ಮಯ ಶಿಕ್ಷಣ ಸಂಸ್ಥೆಯ ಎಂ.ಎನ್. ಪೈ ,ಭಾರತ್ ಬೀಡಿ ವರ್ಕ್ಸ್‌ನ ಕಂಪೆನಿ ಸೆಕ್ರೆಟರಿ ವಾಸುದೇವ ಎಸ್. ಪೈ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಸ್ಥೆಯ ಲೆಕ್ಕ ಪರಿಶೋಧಕ ಸಿಎ ಶಿವಾನಂದ ಪೈ ಸ್ವಾಗತಿಸಿ, ಕಾರ್ಯಕಾರಿ ನಿರ್ದೇಶಕ ಆನಂದ್ ಜಿ. ಪೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net