

ಮಂಡ್ಯ: ಭಾರತೀಯ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ತೆರಿಗೆ ಸಲಹೆಗಾರ ಕೆ.ಜಿ.ಅನಂತರಾವ್ ಸಲಹೆ ನೀಡಿದರು.
ನಗರದ ಗುರುದೇವ್ ಲಲಿತಕಲಾ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಿದ್ದ ಭರತನಾಟ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಓದಿನ ಜತೆಗೆ ಕಲಾತ್ಮಕ ವಿಷಯಗಳ ಕಡೆ ವಿದ್ಯಾರ್ಥಿಗಳು ಗಮನಹರಿಸಬೇಕು. ಭರತನಾಟ್ಯ ಕಲೆಯಲ್ಲಿ ತೊಡಗಿಕೊಂಡವರು ದೇಶವಷ್ಟೇ ಅಲ್ಲದೇ ವಿದೇಶದಲ್ಲಿಯೂ ಹೆಸರು ಮಾಡುವ ಮೂಲಕ ಭಾರತ ಕಲೆಯನ್ನು ಪ್ರದರ್ಶನ ನೀಡುತ್ತಿದ್ದಾರೆ. ಗುರುದೇವ್ ಲಲಿತಕಲಾ ಅಕಾಡೆಮಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭರತನಾಟ್ಯ ಕಲಿಯುತ್ತಿದ್ದಾರೆ. ಅವರಿಗೆ ಪ್ರೇರಣೆಯಾಗಿರುವ ಚೇತನಾ ಮತ್ತು ರಾಧಾಕೃಷ್ಣ ಅವರ ಶ್ರಮಕ್ಕೆ ಪ್ರತಿಫಲ ಸಿಗಬೇಕು ಎಂದು ಆಶಿಸಿದರು.
ರಾಮಚಂದ್ರನ್ ಸುಬೇದಾರ್ ಗುರೂಜಿ, ಅಕಾಡೆಮಿಯ ಮುಖ್ಯಸ್ಥೆ ಚೇತನಾ, ವಿದೂಷಿ ಪಿ.ಎಂ.ರಾಧಾಕೃಷ್ಣ ಇದ್ದರು.