ಚಂಪಕ ರಾಷ್ಟ್ರೀಯ ಕಲಾ ಉತ್ಸವದಲ್ಲಿ ನುರಿತ ಕಲಾವಿದರಿಂದ ಭರತನಾಟ್ಯ ಪ್ರದರ್ಶನ

42
Published on

ಮೈಸೂರು: ಚಂಪಕ ಎಜುಕೇಶನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಭಾರತೀಯ ಪ್ರದರ್ಶಕ ಕಲೆಗಳ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ‘ಚಂಪಕ ರಾಷ್ಟ್ರೀಯ ಕಲಾ ಉತ್ಸವ’ ಶೀರ್ಷಿಕೆಯಡಿ ರಾಮಕೃಷ್ಣ ನಗರದಲ್ಲಿರುವ ಚಂಪಕ ಅಕಾಡೆಮಿಯ ಸಭಾಂಗಣದಲ್ಲಿ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಮತ್ತು ಬೆಂಗಳೂರಿನ ನುರಿತ ಕಲಾವಿದರು ಭರತನಾಟ್ಯ ಪ್ರದರ್ಶನ ನೀಡಿದರು.

ಚಂಪಕ ಅಕಾಡೆಮಿಯ ಸಂಸ್ಥಾಪಕಿ ವಿದುಷಿ ಡಾ.ನಾಗಲಕ್ಷ್ಮೀ ನಾಗರಾಜನ್ ಅವರ ಶಿಷ್ಯೆ, ಕುಮಾರಿ ಶ್ರೇಯ ಕಶ್ಯಪ್ ಅವರ ಭರತನಾಟ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀರಾಮ ಸ್ತೋತ್ರ, ಕೃಷ್ಣ ಕೌತ್ವಂ ಮುಂತಾದ ಪ್ರಸಿದ್ಧ ಸಂಯೋಜನೆಗಳನ್ನು ಪ್ರಸ್ತುತ ಪಡಿಸಿದರು. ನೃತ್ಯದಲ್ಲಿನ ತಮ್ಮ ಅಭಿನಯ ಮತ್ತು ಸುಂದರವಾದ ಚಲನೆಗಳ ಮೂಲಕ ಪ್ರೇಕ್ಷಕರ ಮನ ಸೂರೆಗೊಂಡರು. ಬೆಂಗಳೂರಿನ ವಿದುಷಿ ಸುನೀತ ಸುಕುಮಾರನ್ ಅವರ ಶಿಷ್ಯಂದಿರು ನೃತ್ಯ ಪ್ರದರ್ಶಿಸಿದರು.

ಸದ್ವಿದ್ಯಾ ಕಾಲೇಜಿನ ಕಾರ್ಯದರ್ಶಿ ಪ್ರೊ.ಎಂ.ಎಸ್.ಕೆ.ನರಹರಿ ಬಾಬು, ಡಾ.ನಾಗಲಕ್ಷ್ಮೀ ನಾಗರಾಜನ್, ಚಂಪಕ ಎಜುಕೇಶನಲ್ ಅಂಡ್ ಕಲ್ಚರಲ್ ಟ್ರಸ್ಟ್‌ನ ಟ್ರಸ್ಟಿಗಳಾದ ನಾಗರಾಜನ್ ಶ್ರೀನಿವಾಸನ್, ಕೆ.ಎ.ದೀಪಾಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net