ದಕ್ಷಿಣ ಅಮೆರಿಕಾದ ಕಲಾವಿದೆಯಿಂದ ಭರತನಾಟ್ಯ ಪ್ರಸ್ತುತಿ

ಪೆರಿಯದಲ್ಲಿ ಅನಂಗ ಮಂಜರಿ ಗೊನ್ಸಾಲೇಸ್​ ಭರತನಾಟ್ಯ ಪ್ರದರ್ಶಿಸಿದರು.
ಪೆರಿಯದಲ್ಲಿ ಅನಂಗ ಮಂಜರಿ ಗೊನ್ಸಾಲೇಸ್​ ಭರತನಾಟ್ಯ ಪ್ರದರ್ಶಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೇಕಲ ಪೆರಿಯ ಗೋಕುಲಂ ಗೋಶಾಲೆಯಲ್ಲಿ ಕಾರ್ಯಕ್ರಮ
  • ಕಲಾಭಿಮಾನಿಗಳ ಮನಸೂರೆ
  • ಶಾಸ್ತ್ರೀಯ- ಸಾಂಪ್ರದಾಯಿಕ ನೃತ್ಯ
ವಿಜಯವಾಣಿ ಸುದ್ದಿಜಾಲ ಮುಳ್ಳೇರಿಯ
ಬೇಕಲ ಪೆರಿಯ ಗೋಕುಲಂ ಗೋಶಾಲೆಯಲ್ಲಿ ಆಯೋಜಿಸಲಾಗಿರುವ ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ದಕ್ಷಿಣ ಅಮೆರಿಕಾದ ಪೆರು ದೇಶದ ಕಲಾವಿದೆ ಅನಂಗ ಮಂಜರಿ ಗೊನ್ಸಾಲೇಸ್​ ನಂದಿ ಮಂಟಪದಲ್ಲಿ ಭರತನಾಟ್ಯ ಪ್ರದರ್ಶಿಸಿದರು.

ಕಲಾಭಿಮಾನಿಗಳ ಮನಸೂರೆ

ಗೊನ್ಸಾಲೇಸ್​ ಅವರ ಅಭಿನಯ ಮತ್ತು ತಾಳಲಯಬದ್ಧ ನೃತ್ಯ ಪ್ರದರ್ಶನವು ನೆರೆದಿದ್ದ ಕಲಾಭಿಮಾನಿಗಳ ಮನಸೂರೆಗೊಂಡಿತು. ಡಾ.ಜಾನಕಿ ರಂಗರಾಜ್​ ಅವರ ಶಿಷ್ಯೆ. ಹಾಂಗ್​ಕಾಂಗ್​ನಿಂದ ಆಗಮಿಸಿದ್ದ ಸಂಜಯ್​ ವಡಪಳ್ಳಿ ನಂದಿ ಮಂಟಪದಲ್ಲಿ ನೃತ್ಯಾರ್ಚನೆ ನಡೆಸಿಕೊಟ್ಟರು. ಮುಳಿಯ ಕುಟುಂಬದ ಆದ್ಯ ಸುಲೋಚನಾ, ಶಾರ್ವರಿ ಮಯ್ಯ ಹಾಗೂ ಮೈಸೂರಿನ ಡಾ.ಕೆ.ಕುಮಾರ್​ ಸೇರಿದಂತೆ ಹಲವು ಗಣ್ಯ ಕಲಾವಿದರು ನೃತ್ಯ ವೈವಿಧ್ಯ ಪ್ರಸ್ತುತಪಡಿಸಿದರು.
ಶಾಸ್ತ್ರೀಯ- ಸಾಂಪ್ರದಾಯಿಕ ನೃತ್ಯ
ನೃತ್ಯೋತ್ಸವ ಅಂಗವಾಗಿ ನಂದಿ ಮಂಟಪ ಮತ್ತು ಧೇನು ಮಂಟಪಗಳಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚಿಪುಡಿ, ಕೇರಳ ನಟನಂ, ಕಥಕ್​ ಹಾಗೂ ತಿರುವಾದಿರಕ್ಕಳಿ ಸೇರಿದಂತೆ ವಿವಿಧ ಶಾಸ್ತ್ರೀಯ- ಮತ್ತು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ಸಾಂಗವಾಗಿ ನೆರವೇರಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net