ಭರತನಾಟ್ಯ, ಕುಚಿಪುಡಿ ನೃತ್ಯೋತ್ಸವ

1 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ನೃತ್ಯ ಕಲೆಯಲ್ಲಿ ತೊಡಗಿಕೊಂಡು ಕಲೆಯನ್ನು ಬೆಳೆಸುವುದರ ಮೂಲಕ ಆ ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕು ಎಂದು ಹಿರಿಯ ಕಲಾವಿದ ಡಾ. ಶಶಿಧರ ನರೇಂದ್ರ ಹೇಳಿದರು.

ನವನಗರದ ಪ್ರೇರಣಾ ಕಲಾ ಬಳಗ ವತಿಯಿಂದ ಇಲ್ಲಿನ ಆಲೂರು ವೆಂಕಟರಾವ್​ ಭವನದಲ್ಲಿ ಏರ್ಪಡಿಸಿದ್ದ ಭರತನಾಟ್ಯ ಕುಚಿಪುಡಿ ನೃತ್ಯೋತ್ಸವ-2024 ಸಮಾರಂಭದಲ್ಲಿ ಪ್ರೇರಣಾ ಕಲಾ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಕುಚಿಪುಡಿ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪ್ರೇರಣಾ ನೃತ್ಯ ಸಂಸ್ಥೆ ಮಕ್ಕಳು ನಿಜಕ್ಕೂ ಪ್ರೇರಣಾದಾಯಕವಾಗಿದ್ದಾರೆ ಎಂದರು.

ಪ್ರಸನ್ನ ಗುಡಿ ಮಾತನಾಡಿದರು. ವಿದುಷಿ ಜ್ಯೋತಿ ಗಲಗಲಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಲೆಗಳಲ್ಲಿ ಸಾಧನೆ ಮಾಡಿದ ಭಾರ್ಗವಿ ಕುಲಕರ್ಣಿ, ಬಸವರಾಜ ಹೂಗಾರ, ವಿದುಷಿ ಡಾ.ನವಮಿ ಉಪಾಧ್ಯಾಯ, ವಿಜಯೀಂದ್ರ ಅರ್ಚಕ ಅವರಿಗೆ ಸನ್ಮಾನಿಸಲಾಯಿತು.

ಸ್ನೇಹಾ ಮಹಾಲೆ, ರಾಜಶ್ರೀ, ಹರ್ಷಾ, ರಾಧಾ ಜೋಶಿ, ಇತರರು ಇದ್ದರು. ರವಿ ಕುಲಕರ್ಣಿ ಹಾಗೂ ಸತೀಶ ಮೂರೂರ ನಿರೂಪಿಸಿದರು. ನಂತರ ಸಂಸ್ಥೆ ವಿದ್ಯಾರ್ಥಿಗಳು ನೃತ್ಯ ಪ್ರದಶಿರ್ಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net