ಪರಂಪರೆ ಬಿಂಬಿಸುವ ಅದ್ಭುತ ಕಲೆ ಭರತನಾಟ್ಯ

LXR-Bharatanatya
Published on

ಲಕ್ಷ್ಮೇಶ್ವರ: ಭರತನಾಟ್ಯವು ದೇಶದ ಸಂಸ್ಕೃತಿ, ಪರಂಪರೆ ಬಿಂಬಿಸುವ ಅದ್ಭುತ ಕಲೆಯಾಗಿದೆ ಎಂದು ಧಾರವಾಡದ ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ನಾಮ ನಿರ್ದೇಶಕ ಸದಸ್ಯ ಬಸವರಾಜ ಕುಂದಗೋಳಮಠ ಅಭಿಪ್ರಾಯಪಟ್ಟರು.

ಪಟ್ಟಣದ ವೇದಿಕಾ ಭರತನಾಟ್ಯ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ರಂಭಾಪುರಿ ಜ.ವೀರಗಂಗಾಧರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ನೃತ್ಯ -ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಭರತನಾಟ್ಯ ಭಾರತೀಯ ಸಾಂಪ್ರದಾಯಿಕ ಶ್ರೇಷ್ಠ ನೃತ್ಯ ಕಲೆಯಾಗಿದೆ. ಮಕ್ಕಳಲ್ಲಿ ಸಂಸ್ಕಾರ, ದೇವರು, ಧರ್ಮ, ಗುರು-ಹಿರಿಯರಲ್ಲಿ ವಿಧೇಯತೆ ಜತೆಗೆ ಮಾನಸಿಕ, ದೈಹಿಕ ಆರೋಗ್ಯವನ್ನುಂಟು ಮಾಡುತ್ತದೆ. ಪ್ರಸ್ತುತ ಟಿವಿ, ಕಂಪ್ಯೂಟರ್,ಮೊಬೈಲ್ ಇತರ ತಂತ್ರಜ್ಞಾನದ ಪ್ರಭಾವದ ನಡುವೆಯೂ ದೇಶದ ಸಾಂಸ್ಕೃತಿಕ, ಕಲೆ, ಸಂಗೀತ, ಸಾಹಿತ್ಯ, ಆಚರಣೆಗಳನ್ನು ಉಳಿಸಿ-ಬೆಳೆಸಿ-ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಎಲ್ಲರದು ಎಂದರು.

ವೇದಿಕಾ ನೃತ್ಯ ಶಾಲೆಯ ಶಿಕ್ಷಕಿ ಡಾ. ಹೇಮಾ ವಾಘಮೋಡೆ ಮಾತನಾಡಿ, ಮಕ್ಕಳಿಗೆ ನೃತ್ಯ ಜತೆಗೆ ಆಧ್ಯಾತ್ಮಿಕ, ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸುವುದು, ದೇಶಭಕ್ತಿಯ ವಿಚಾರಗಳನ್ನು ತಿಳಿಹೇಳುವುದು, ಶಿಸ್ತು ಬದ್ಧ ಜೀವನ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಲೆಗೆ ದೇಶದೆಲ್ಲೆಡೆ ಬೆಲೆಯಿದೆ. ಮಕ್ಕಳಲ್ಲಿನ ಕಲೆಗೆ ಪ್ರೋತ್ಸಾಹ ನೀಡಿ ಬೆಳೆಸುವ ಕಾರ್ಯವನ್ನು ಪಾಲಕರು ಮಾಡಬೇಕು ಎಂದರು.

ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸುನೀಲ ಮಹಾಂತಶೆಟ್ಟರ ಮಾತನಾಡಿದರು. ವೇದಿಕೆ ಅಧ್ಯಕ್ಷ ಮಹದೇವಪ್ಪ ಚಕ್ರಸಾಲಿ ಅಧ್ಯಕ್ಷತೆ ವಹಿಸಿದ್ದರು. ವೇದಿಕಾ ನೃತ್ಯ ಶಾಲೆ ಕಾರ್ಯದರ್ಶಿ ಸರೋಜಾ ಎಂ. ಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಐ.ಸಿ. ಹತ್ತಿಕಾಳ, ವಿದುಷಿ ಡಾ. ಹೇಮಾ ವಾಘಮೋಡೆಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸಲಾಯಿತು.

ನೃತ್ಯ ಶಿಕ್ಷಕಿ ನಯನಾ ದಳವಾಯಿ, ವಿಜಯ ಕುಂಬಾರ, ಪ್ರವೀಣ ಬೋಮಲೆ, ಅನಿಲ ಹೆಬ್ಬಾಳ, ವೀರೇಶ ಸಾಸಲವಾಡ, ರವಿ ಚಕ್ರಸಾಲಿ, ಸಂತೋಷ ಡಠಬಳ, ಸಂಜೀವ ಪೂಜಾರ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಹೊಗೆಸೊಪ್ಪಿನ ಇತರರು ಇದ್ದರು. ರತ್ನಾ ಕುಂಬಾರ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ನಾಡು-ನುಡಿ, ಕನ್ನಡ ಹೋರಾಟಗಾರರು, ಸಾಹಿತಿಗಳು, ಕವಿಗಳು, ಸಂತರು ಸೇರಿದಂತೆ ಕರ್ನಾಟಕದ ಪರಂಪರೆಯನ್ನು ನೃತ್ಯದ ಮೂಲಕ ವಿದ್ಯಾರ್ಥಿಗಳು ಪ್ರಸ್ತುತಪಡಿಸಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net