

ಕೋಟ: ಸರ್ಕಾರಿ ಶಾಲೆಯಾಗಿದ್ದರೂ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಬೆಳೆಯುವ ಅವಕಾಶ ಒದಗಿಸುತ್ತಿರುವ ಹೆಸಕುತ್ತೂರು ಪ್ರಾಥಮಿಕ ಶಾಲೆ ಇತರೆ ಶಾಲೆಗಳಿಗೆ ಮಾದರಿ ಎಂದು ಹಿರಿಯ ನಿವೃತ್ತ ಶಿಕ್ಷಕಿ ರತ್ನಾ ಹೇಳಿದರು.
ಹೆಸಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ಭರತನಾಟ್ಯ ತರಗತಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಶಿಕ್ಷಕ ಶೇಖರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಭರತನಾಟ್ಯ ಗುರು, ವಿದುಷಿ ಭಾಗೀರಥಿ ಎಂ.ರಾವ್ ಭರತನಾಟ್ಯ ಕಲೆಯ ಕುರಿತು ಪರಿಚಯಾತ್ಮಕವಾಗಿ ಮಾತನಾಡಿದರು.
ಕೊರ್ಗಿ ಗ್ರಾಪಂ ಉಪಾಧ್ಯಕ್ಷೆ ಪಲ್ಲವಿ ಕುಲಾಲ, ಜಿ.ಪಿ.ಎಫ್ ಇಲಾಖೆ ನಿವೃತ್ತ ನೌಕರ ಮಧುಕರ ರಾವ್, ಶಿಕ್ಷಕರಾದ ಸಂಜೀವ ಎಂ., ಜಯಲಕ್ಷ್ಮಿ ಬಿ., ರವೀಂದ್ರ ನಾಯಕ್, ಸ್ವಾತಿ ಬಿ., ಗೌರವ ಶಿಕ್ಷಕಿ ಮಧುರಾ ಉಪಸ್ಥಿತರಿದ್ದರು. ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಸ್ವಾಗತಿಸಿದರು. ವಿಜಯಾ ಆರ್. ವಂದಿಸಿದರು. ವಿಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.