

ಬಂಟ್ವಾಳ: ಭಾರತ ಸೇವಾದಳ ಬಂಟ್ವಾಳ ತಾಲೂಕು ಸಮಿತಿ ಹಾಗೂ ನರಿಕೊಂಬು ಸ.ಹಿ.ಪ್ರಾ.ಶಾಲೆ ಆಶ್ರಯದಲ್ಲಿ ಸೇವಾದಳ ಶಿಕ್ಷಕ ಶಿಕ್ಷಕಿಯರ ಪುನಶ್ಚೇತನ ಶಿಬಿರ ನರಿಕೊಂಬು ಶಾಲೆಯಲ್ಲಿ ನಡೆಯಿತು.
ಎಸ್‌ಡಿಎಂಸಿ ಅಧ್ಯಕ್ಷ ರವಿ ಅಂಚನ್ ಉದ್ಘಾಟಿಸಿದರು. ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸೇವಾದಳ ಶಿಕ್ಷಕಿಯರಾದ ಬೊಂಡಾಳ ಶಾಲಾ ಮುಖ್ಯ ಶಿಕ್ಷಕಿ ರೇಖಾ ಹಾಗೂ ನರಿಕೊಂಬು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿಯನ್ನು ಗೌರವಿಸಲಾಯಿತು. ತಾಲೂಕು ಸಮಿತಿ ಅಧ್ಯಕ್ಷ ಟಿ.ಶೇಷಪ್ಪ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕಿ ಶೋಭಾ ಸ್ವಾಗತಿಸಿದರು. ಕಾರ್ಯದರ್ಶಿ ಸುನೀಲ್ ಸಿಕ್ವೇರ ವರದಿ ವಾಚಿಸಿದರು. ಸೇವಾದಳದ ಜಿಲ್ಲಾ ಸಂಘಟಕ ಮಂಜೇಗೌಡ ಪ್ರಸ್ತಾಪಿಸಿದರು. ಶಿಕ್ಷಕ ಪರಮೇಶ್ವರ್ ವಂದಿಸಿದರು. ಶಿಕ್ಷಕಿ ರೇಖಾ ನಿರೂಪಿಸಿದರು.