ಕಸದ ಕೊಂಪೆಯಾದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಮೈದಾನ

ahara mela
Published on

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ‘ಆಹಾರ ಮೇಳ’ ಆಯೋಜಿಸಿದ್ದ ನಗರದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಮೈದಾನ ಇದೀಗ ಕಸದ ಕೊಂಪೆಯಾಗಿದೆ.


ಆಹಾರ ಮೇಳ ಮುಕ್ತಾಯಗೊಂಡ ಒಂದು ವಾರಕಳೆದರೂ ಸ್ಕೌಟ್ ಮತ್ತು ಗೈಡ್ಸ್ ಮೈದಾನವನ್ನು ಸ್ವಚ್ಛಗೊಳಸದ ಕಾರಣ ಇಡೀ ಆವರಣ ಗಬ್ಬೆದ್ದು ನಾರುತ್ತಿದೆ. ಪರಿಣಾಮ ಪಕ್ಕದಲ್ಲೇ ಇರುವ ಖಾಸಗಿ ಶಾಲೆಯ ಮಕ್ಕಳು ನರಕಯಾತನೆ ಅನುಭವಿಸುವಂತಾಗಿದೆ.

ದಸರೆಯ ಪ್ರಮುಖ ಆಕರ್ಷಣೆಯಾಗಿದ್ದ ಆಹಾರ ಮೇಳದಲ್ಲಿ ಸಹಸ್ರಾರು ಜನ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಅವರು ತಿಂದು ಬಿಸಾಡಿದ ಪ್ಲೇಟ್‌ಗಳು, ನೀರಿನ ಬಾಟಲ್‌ಗಳು ಇನ್ನಿತರ ತ್ಯಾಜ್ಯಗಳು ಎಲ್ಲೆಂದರಲ್ಲಿ ಬಿದ್ದಿವೆ. ಇಡೀ ಆವರಣದಲ್ಲಿ ಕಸದ ರಾಶಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net